ಶ್ರೀಹರಿಕೋಟಾ : ಇಸ್ರೋ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದ್ದು, ಆದಿತ್ಯ ಎಲ್-1 ಯಶಸ್ವಿಯಾಗಿ ಗುರಿ ತಲುಪಿದೆ. ಲ್ಯಾಂಗ್ರೇಜ್ ಪಾಯಿಂಟ್’ನಲ್ಲಿ ಯಶಸ್ವಿಯಾಗಿ ಲ್ಯಾಂಡ್ ಆಗಿದೆ. ಈ ಮೂಲಕ ಬಾಹ್ಯಾಕಾಶ ಸಂಸ್ಥೆಯ 5 ವರ್ಷಗಳ ಪರಿಶ್ರಮ ಫಲ ನೀಡಿದೆ.
India creates yet another landmark. India’s first solar observatory Aditya-L1 reaches it destination. It is a testament to the relentless dedication of our scientists in realising among the most complex and intricate space missions. I join the nation in applauding this…
— Narendra Modi (@narendramodi) January 6, 2024
ಹೌದು, ಹೊಸ ವರ್ಷದಂದು ಇಸ್ರೋ ಇತಿಹಾಸ ಸೃಷ್ಟಿಸಿದೆ. ಭಾರತದ ಆದಿತ್ಯ ಉಪಗ್ರಹವನ್ನು ಎಲ್ 1 ಬಿಂದುವಿನ ಹ್ಯಾಲೋ ಕಕ್ಷೆಗೆ ಸೇರಿಸಲಾಗಿದೆ. ಇನ್ನು ಭಾರತದ ಮೊದಲ ಸೌರ ನೌಕೆ ಭೂಮಿಯಿಂದ 15 ಲಕ್ಷ ಕಿ.ಮೀ ಕ್ರಮಿಸಿದೆ. ಈ ಮೂಲಕ 4 ತಿಂಗಳ ಆದಿತ್ಯ ಪ್ರಯಾಣ ಮುಗಿದಿದೆ. 400 ಕೋಟಿ ರೂ.ಗಳ ಈ ಮಿಷನ್ ಈಗ ಭಾರತ ಸೇರಿದಂತೆ ಇಡೀ ವಿಶ್ವದ ಉಪಗ್ರಹಗಳನ್ನು ಸೌರ ಬಿರುಗಾಳಿಗಳಿಂದ ರಕ್ಷಿಸುತ್ತದೆ.
ಅಂದ್ಹಾಗೆ, ಆದಿತ್ಯ ಪ್ರಯಾಣವು 2 ಸೆಪ್ಟೆಂಬರ್ 2023 ರಂದು ಪ್ರಾರಂಭವಾಯಿತು. ಇಂದು ಸಂಜೆ, ಈ ಉಪಗ್ರಹವು ಎಲ್ 1 ಬಿಂದುವನ್ನ ತಲುಪಿತು. ಈ ಬಿಂದುವಿನ ಸುತ್ತಲೂ ಸೌರ ಹ್ಯಾಲೋ ಕಕ್ಷೆಯನ್ನ ನಿಯೋಜಿಸಲಾಗಿದೆ. ಆದಿತ್ಯ-ಎಲ್ 1 ಉಪಗ್ರಹದ ಥ್ರಸ್ಟರ್’ಗಳನ್ನ ಹ್ಯಾಲೋ ಕಕ್ಷೆಯಲ್ಲಿ ಇರಿಸಲು ಸ್ವಲ್ಪ ಸಮಯದವರೆಗೆ ಆನ್ ಮಾಡಲಾಯಿತು. ಇದು ಒಟ್ಟು 12 ಥ್ರಸ್ಟರ್’ಗಳನ್ನ ಹೊಂದಿದೆ.
BREAKING : ಹೊಸ ‘ಔಷಧ ತಯಾರಿಕೆ ಮಾನದಂಡ’ ಅನುಸರಿಸಲು ಕಂಪನಿಗಳಿಗೆ ಕೇಂದ್ರ ಸರ್ಕಾರ ಆದೇಶ