ನವದೆಹಲಿ : ಇಸ್ಲಾಮಿಕ್ ಸ್ಟೇಟ್ (ISIS)ನ ಭಾರತದ ಕಾರ್ಯಾಚರಣೆಗಳ ಮುಖ್ಯಸ್ಥ ಮತ್ತು ನಿಷೇಧಿತ ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾ (SIMI)ನ ಮಾಜಿ ಪದಾಧಿಕಾರಿ ಸಕ್ವಿಬ್ ನಾಚನ್ ಶನಿವಾರ ಮಧ್ಯಾಹ್ನ ಮೆದುಳು ರಕ್ತಸ್ರಾವದಿಂದ ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದಾನೆ. ಇನ್ನು ಅತನಿಗೆ 57 ವರ್ಷ ವಯಸ್ಸಾಗಿತ್ತು.
ದೆಹಲಿ ಮತ್ತು ಮಹಾರಾಷ್ಟ್ರದ ಪಡ್ಘಾ ಪ್ರದೇಶವನ್ನು ವ್ಯಾಪಿಸಿರುವ ಐಸಿಸ್ ಭಯೋತ್ಪಾದಕ ಘಟಕಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಬಂಧಿಸಿದ ನಂತರ ನಾಚನ್ 2023ರಿಂದ ತಿಹಾರ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ. ಬಂಧನದಲ್ಲಿದ್ದಾಗ ಆತನ ಆರೋಗ್ಯ ಹದಗೆಟ್ಟ ನಂತರ ಮಂಗಳವಾರ ಆಸ್ಪತ್ರೆಗೆ ದಾಖಲಿಸಲಾಯಿತು.
ದಾಖಲಾದ ಸ್ವಲ್ಪ ಸಮಯದ ನಂತರ ವೈದ್ಯರು ಮೆದುಳಿನ ರಕ್ತಸ್ರಾವವನ್ನು ದೃಢಪಡಿಸಿದರು. ಅನಾಲ್ಕು ದಿನಗಳ ಕಾಲ ವೈದ್ಯಕೀಯ ವೀಕ್ಷಣೆಯಲ್ಲಿದ್ದು, ಇಂದು ಬೆಳಿಗ್ಗೆ ಅವರ ಸ್ಥಿತಿ ಹದಗೆಟ್ಟಿತು. ಆಸ್ಪತ್ರೆ ಅಧಿಕಾರಿಗಳ ಪ್ರಕಾರ, ಮಧ್ಯಾಹ್ನ 12:10 ಕ್ಕೆ ಅವರು ನಿಧನವಾಗಿದ್ದಾನೆ.
ಸಕ್ವಿಬ್ ಅಬ್ದುಲ್ ಹಮೀದ್ ನಾಚನ್ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಪಡ್ಘಾ ಪಟ್ಟಣಕ್ಕೆ ಸೇರಿದ್ದಾನೆ. 1990ರ ದಶಕದ ಉತ್ತರಾರ್ಧದಲ್ಲಿ ಮತ್ತು 2000ರ ದಶಕದ ಆರಂಭದಲ್ಲಿ, 2001ರಲ್ಲಿ ರಾಷ್ಟ್ರ ವಿರೋಧಿ ಚಟುವಟಿಕೆಗಳಿಗಾಗಿ ನಿಷೇಧಿಸಲ್ಪಟ್ಟ ಸಂಘಟನೆಯಾದ SIMI ನಲ್ಲಿ ಹಿರಿಯ ವ್ಯಕ್ತಿಯಾಗಿ ಬೆಳೆದ.
ರಾಮಚರಿತಮಾನಸದ ಈ ಶ್ಲೋಕಗಳು ನಿಮ್ಮ ಎಲ್ಲಾ ಆಸೆ ಪೂರೈಸುತ್ವೆ, ದೊಡ್ಡ ಸಮಸ್ಯೆ ಸಹ ದೂರವಾಗುತ್ವೆ!
Watch Video: ಗುತ್ತಿಗೆ ಸ್ಟಾಫ್ ನರ್ಸ್ ರಿನೀವಲ್ ಗೆ ಲಂಚಕ್ಕೆ ಬೇಡಿಕೆ ಇಟ್ಟ ವೈದ್ಯ: ಆಡಿಯೋ ವೈರಲ್