ಟೆಲ್ ಅವಿವ್: ಇರಾನ್‌ನ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳುವ ಇರಾನ್‌ನ ಶಪಥದ ಬೆನ್ನಲ್ಲೇ, ಇಸ್ರೇಲ್‌ನ ವಾಣಿಜ್ಯ ನಗರಿ ಟೆಲ್ ಅವಿವ್ ಮೇಲೆ ಇರಾನ್ ಭೀಕರ ಕ್ಷಿಪಣಿ ದಾಳಿ ನಡೆಸಿದೆ. ಈ ದಾಳಿಯಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು, ಕನಿಷ್ಠ 27 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.
ನಗರದ ಹೃದಯಭಾಗದಲ್ಲೇ ಸ್ಫೋಟ
ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್ (IRGC) ಉಡಾಯಿಸಿದ ಕ್ಷಿಪಣಿಗಳು ಟೆಲ್ ಅವಿವ್‌ನ ಜನನಿಬಿಡ ಪ್ರದೇಶಗಳಿಗೆ ಅಪ್ಪಳಿಸಿವೆ. ಇಸ್ರೇಲ್‌ನ ಅತ್ಯಾಧುನಿಕ ‘ಐರನ್ ಡೋಮ್’ ರಕ್ಷಣಾ ಕವಚವನ್ನು ಭೇದಿಸಿ ಕೆಲವು ಕ್ಷಿಪಣಿಗಳು ನಗರದ ಕಟ್ಟಡಗಳ ಮೇಲೆ ಬಿದ್ದಿದ್ದರಿಂದ ಭಾರೀ ಹಾನಿ ಸಂಭವಿಸಿದೆ. ದಾಳಿಯ ಬೆನ್ನಲ್ಲೇ ನಗರದಾದ್ಯಂತ ಸೈರನ್ ಮೊಳಗಿದ್ದು, ಜನರು ಆತಂಕದಿಂದ ಬಂಕರ್‌ಗಳತ್ತ ಧಾವಿಸಿದ್ದಾರೆ.
ಗಾಯಾಳುಗಳ ಸ್ಥಿತಿ ಗಂಭೀರ
ಗಾಯಗೊಂಡ 27 ಮಂದಿಯನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಅವರಲ್ಲಿ ಕೆಲವರ ಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ. ಸ್ಫೋಟದ ತೀವ್ರತೆಗೆ ಹಲವಾರು ವಾಹನಗಳು ಮತ್ತು ವಸತಿ ಸಮುಚ್ಚಯಗಳು ಬೆಂಕಿಗೆ ಆಹುತಿಯಾಗಿವೆ.
ಇರಾನ್‌ನ ಪ್ರತೀಕಾರದ ಆರಂಭ?
ಖಮೇನಿ ನಿಧನದ ನಂತರ ಇರಾನ್ ಘೋಷಿಸಿದ್ದ 40 ದಿನಗಳ ಶೋಕಾಚರಣೆಯ ನಡುವೆಯೇ ಈ ದಾಳಿ ನಡೆದಿದೆ. “ಇದು ಕೇವಲ ಆರಂಭವಷ್ಟೇ, ನಮ್ಮ ನಾಯಕನ ಸಾವಿಗೆ ಇಸ್ರೇಲ್ ಭಾರೀ ಬೆಲೆ ತೆರಬೇಕಾಗುತ್ತದೆ” ಎಂದು ಇರಾನ್‌ನ ಸೇನಾ ಮೂಲಗಳು ಎಚ್ಚರಿಕೆ ನೀಡಿವೆ. ಈ ದಾಳಿಯು ಮಧ್ಯಪ್ರಾಚ್ಯದಲ್ಲಿ ಪೂರ್ಣ ಪ್ರಮಾಣದ ಯುದ್ಧಕ್ಕೆ ನಾಂದಿ ಹಾಡುವ ಸಾಧ್ಯತೆಯಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
1 killed, 27 injured in Iranian missile strike on Tel Aviv
Read @ANI Story | https://t.co/9Zga2uu9f2#Israel #TelAviv #Iran #US pic.twitter.com/sQKdsaQ9GF— ANI Digital (@ani_digital) March 1, 2026







