ಇರಾನ್ ಮತ್ತು ಇಸ್ರೇಲ್ ನಡುವೆ ಯುದ್ಧದ ಕಾರ್ಮಾಡೋದ ನಡುವೆ ಇದೀಗ ಕದನ ವಿರಾಮಕ್ಕೆ ಇರಾನ್ ಮುಂದಾಗಿದ್ದು, ಇಸ್ರೇಲ್ ಜೊತೆಗೆ ಚರ್ಚೆಗೆ ನಿರ್ಧಾರ ಕೈಗೊಂಡಿದೆ.
ಕದನ ವಿರಾಮ ಬಗ್ಗೆ ಇಸ್ರೇಲ್ ಜೊತೆಗೆ ಮಾತುಕತೆಗೆ ಸಿದ್ಧ ಎಂದು ಇರಾನ್ ಹೇಳಿದೆ. ಇಸ್ರೇಲ್ ದಾಳಿ ನಿಲ್ಲಿಸುವಂತೆ ಸೂಚಿಸಲು ಅಮೆರಿಕಕ್ಕೆ ಇರಾನ್ ಸರ್ಕಾರ ಮನವಿ ಮಾಡಿದೆ.
ಪರಮಾಣು ಸಂಬಂಧ ಮಾತುಕತೆಗೂ ಇರಾನ್ ಸರ್ಕಾರ ಮುಂದಾಗಿದೆ. ಸೌದಿ, ಕತಾರ್, ಒಮನ್ ಮಧ್ಯಸ್ಥಿತಿ ವಹಿಸುವಂತೆ ಇರಾನ್ ಮನವಿ ಮಾಡಿದೆ.