ಜಗತ್ತಿನಾದ್ಯಂತ ಲಕ್ಷಾಂತರ ಜನಪ್ರಿಯ ಸಾಮಾಜಿಕ ಜಾಲತಾಣವಾಗಿರುವ ಇನ್ಸ್ಟಾಗ್ರಾಮ್ (Instagram) ತಾಂತ್ರಿಕ ದೋಷದಿಂದಾಗಿ ಸ್ಥಗಿತಗೊಂಡಿದೆ. ಕಳೆದ ಒಂದು ಗಂಟೆಯಿಂದ ಸಾವಿರಾರು ಬಳಕೆದಾರರು ಲಾಗಿನ್ ಆಗಲು ಮತ್ತು ಹೊಸ ಪೋಸ್ಟ್ಗಳನ್ನು ನೋಡಲು ಸಾಧ್ಯವಾಗದೆ ತೊಂದರೆ ಅನುಭವಿಸುತ್ತಿದ್ದಾರೆ.
ಇಂದು ಮಧ್ಯಾಹ್ನದಿಂದಲೇ ಇನ್ಸ್ಟಾಗ್ರಾಮ್ ಸೇವೆಯಲ್ಲಿ ವ್ಯತ್ಯಯ ಕಂಡುಬಂದಿದೆ. ಆನ್ಲೈನ್ ಸೇವೆಗಳ ಸ್ಥಿತಿಗತಿಯನ್ನು ಗಮನಿಸುವ ‘ಡೌನ್ ಡಿಟೆಕ್ಟರ್’ (Down Detector) ವೆಬ್ಸೈಟ್ನಲ್ಲಿ ಈಗಾಗಲೇ ನೂರಾರು ಮಂದಿ ದೂರುಗಳನ್ನು ದಾಖಲಿಸಿದ್ದಾರೆ.
ಬಳಕೆದಾರರಿಗೆ ತಮ್ಮ ಫೀಡ್ಗಳನ್ನು ರಿಫ್ರೆಶ್ ಮಾಡಲು ಸಾಧ್ಯವಾಗುತ್ತಿಲ್ಲ ಮತ್ತು ‘ಕುಡ್ ನಾಟ್ ರಿಫ್ರೆಶ್ ಫೀಡ್’ (Could not refresh feed) ಎಂಬ ಸಂದೇಶ ಬರುತ್ತಿದೆ.ಪ್ರಮುಖವಾಗಿ ಸ್ಟೋರಿಗಳು ಮತ್ತು ರೀಲ್ಸ್ಗಳು ಪ್ಲೇ ಆಗುತ್ತಿಲ್ಲ. ಮೆಸೇಜ್ ಕಳುಹಿಸಲು ಕೂಡ ಅಡಚಣೆಯಾಗುತ್ತಿದೆ ಎಂದು ವರದಿಯಾಗಿದೆ.
ಟ್ವಿಟರ್ನಲ್ಲಿ ಆಕ್ರೋಶ: ಇನ್ಸ್ಟಾಗ್ರಾಮ್ ಕೆಲಸ ಮಾಡದ ಹಿನ್ನೆಲೆಯಲ್ಲಿ ಬಳಕೆದಾರರು ಎಕ್ಸ್ (ಟ್ವಿಟರ್) ನಲ್ಲಿ #InstagramDown ಎಂಬ ಹ್ಯಾಶ್ಟ್ಯಾಗ್ನೊಂದಿಗೆ ತಮ್ಮ ಅಸಮಾಧಾನ ಹೊರಹಾಕುತ್ತಿದ್ದಾರೆ.







