ನವದೆಹಲಿ : ಬಾಂಗ್ಲಾದೇಶ ವಿರುದ್ಧದ ಮೂರು ಪಂದ್ಯಗಳ ಟಿ20ಐ ಸರಣಿಗೆ ಭಾರತ ತಂಡವನ್ನ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಶನಿವಾರ ಪ್ರಕಟಿಸಿದೆ.
“ಪುರುಷರ ಆಯ್ಕೆ ಸಮಿತಿಯು ಮುಂಬರುವ ಬಾಂಗ್ಲಾದೇಶ ವಿರುದ್ಧದ ಐಡಿಎಫ್ಸಿ ಫಸ್ಟ್ ಬ್ಯಾಂಕ್ ಟಿ20ಐ ಸರಣಿಗೆ ಭಾರತದ 15 ಸದಸ್ಯರ ತಂಡವನ್ನು ಆಯ್ಕೆ ಮಾಡಿದೆ. ಟೆಸ್ಟ್ ಸರಣಿ ಮುಗಿದ ನಂತರ ಭಾರತವು ಗ್ವಾಲಿಯರ್, ನವದೆಹಲಿ ಮತ್ತು ಹೈದರಾಬಾದ್ನಲ್ಲಿ ಮೂರು ಟಿ 20 ಪಂದ್ಯಗಳನ್ನು ಆಡಲಿದೆ” ಎಂದು ಬಿಸಿಸಿಐ ಹೇಳಿಕೆಯಲ್ಲಿ ತಿಳಿಸಿದೆ.
ಸೂರ್ಯಕುಮಾರ್ ಯಾದವ್ ಭಾರತವನ್ನ ಮುನ್ನಡೆಸಲಿದ್ದು, ಹಾರ್ದಿಕ್ ಪಾಂಡ್ಯ ಕೂಡ ತಂಡದಲ್ಲಿದ್ದಾರೆ. ಐಪಿಎಲ್ ಸೆನ್ಸೇಷನ್ ಮಯಾಂಕ್ ಯಾದವ್’ಗೆ ಭಾರತ ತಂಡವು ಮೊದಲ ಕರೆಯನ್ನ ನೀಡಿದೆ. ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಗೆ ತಂಡದಲ್ಲಿ ಯಾವುದೇ ಆಟಗಾರರಿಲ್ಲ.
ಬಾಂಗ್ಲಾದೇಶ ವಿರುದ್ಧದ 3 ಟಿ20 ಪಂದ್ಯಗಳಿಗೆ ಭಾರತ ತಂಡ ಇಂತಿದೆ.!
ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರಿಂಕು ಸಿಂಗ್, ಹಾರ್ದಿಕ್ ಪಾಂಡ್ಯ, ರಿಯಾನ್ ಪರಾಗ್, ನಿತೀಶ್ ಕುಮಾರ್ ರೆಡ್ಡಿ, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ವರುಣ್ ಚಕ್ರವರ್ತಿ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಅರ್ಷ್ದೀಪ್ ಸಿಂಗ್, ಹರ್ಷಿತ್ ರಾಣಾ, ಮಯಾಂಕ್ ಯಾದವ್.
BREAKING : ತಮಿಳುನಾಡಿನ ಉಪ ಮುಖ್ಯಮಂತ್ರಿಯಾಗಿ ‘ಉದಯನಿಧಿ ಸ್ಟಾಲಿನ್’ ನೇಮಕ |Udhayanidhi Stalin
BREAKING ; ಮತ್ತೊಬ್ಬ ಹಿಜ್ಬುಲ್ಲಾ ‘ನಾಯಕ’ ಗುರಿಯಾಗಿಸಿ ಇಸ್ರೇಲ್ ‘ಏರ್ ಸ್ಟ್ರೈಕ್’ : ವರದಿ
ಶೀಘ್ರದಲ್ಲೇ ‘ಭೂಮಿ’ ಅಂತ್ಯವಾಗುತ್ತೆ.! : ‘ಹೊಸ ಸಂಶೋಧನೆ’ಯಿಂದ ಶಾಕಿಂಗ್ ಸಂಗತಿ ಬಹಿರಂಗ