ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಭೂಕಂಪದ ನಡುವೆಯೂ ಚೀನಾದ ಹುಡುಗನೊಬ್ಬ ತನ್ನ ಅಸಾಮಾನ್ಯ ಮನಸ್ಥಿತಿಯಿಂದ ಇಂಟರ್ನೆಟ್’ನಲ್ಲಿ ನಗೆಪಾಟಲಿಗೆ ಈಡಾಗಿದ್ದಾನೆ. ಜೂನ್ 23ರಂದು ದಕ್ಷಿಣ ಚೀನಾದ ಗುವಾಂಗ್‌ಡಾಂಗ್ ಪ್ರಾಂತ್ಯದಲ್ಲಿ 4.3 ತೀವ್ರತೆಯ ಭೂಕಂಪ ಸಂಭವಿಸಿದ್ದು, ಕುಟುಂಬವು ಭಯಭೀತವಾಗಿದೆ; ಕುಟುಂಬ ಸದಸ್ಯರು ಸುರಕ್ಷತೆಗಾಗಿ ಹೊರಗೆ ಓಡಿ ಹೋಗಿದ್ದಾರೆ. ಆದ್ರೆ, ಹಸಿದ ಬಾಲಕ ಮೇಜಿನ ಮೇಲಿನ ಆಹಾರಕ್ಕಾಗಿ ಹಿಂತಿರುಗುತ್ತಾನೆ. ಆತುರದಲ್ಲಿ, ಗಬಗಬನೇ ಸಾಧ್ಯವಾದಷ್ಟು ಆಹಾರವನ್ನ ತಿಂದಿದ್ದು, ಮತ್ತೆ ಓಡಿಹೋಗುತ್ತಾನೆ.
ಊಟ ಮೊದಲು.!
ಅಪರಿಚಿತ ಬಾಲಕನ ಮನೆಯ ಸಿಸಿಟಿವಿ ದೃಶ್ಯಾವಳಿಗಳು ಬಹಿರಂಗಗೊಳ್ಳುತ್ತಿದ್ದಂತೆ ಇಂಟರ್ನೆಟ್’ನಲ್ಲಿ ವೈರಲ್ ಆಗಿದೆ. ಜೀವನ್ಮರಣ ಪರಿಸ್ಥಿತಿಯಲ್ಲಿ ಆಹಾರದ ಬಗ್ಗೆ ಅವನ ರಾಜಿಯಾಗದ ನೀತಿಯಿಂದ ನೆಟ್ಟಿಗರು ಖುಷಿಪಟ್ಟಿದ್ದಾರೆ. ವೈರಲ್ ವೀಡಿಯೊದಲ್ಲಿ ತಂದೆ ಮತ್ತು ಅವರ ಇಬ್ಬರು ಮಕ್ಕಳ ಕುಟುಂಬವು ಊಟದ ಮೇಜಿನ ಮೇಲೆ ಊಟ ಮಾಡುವುದನ್ನ ಕಾಣಬಹುದು, ಆಗ ಅಸಾಮಾನ್ಯ ಶಬ್ದಗಳು ಮತ್ತು ಭೂಕಂಪದ ಸಂವೇದನೆಗಳನ್ನ ಗಮನಿಸಿದ ತಂದೆ, ಆತನ ಕಿರಿಯ ಮಗನ ಕೈ ಹಿಡಿದು ಹೊರಗೆ ಹೋಗ್ತಾನೆ. ಹಿಂದೆಯೇ ಹಿರಿಯ ಮಗ ಓಡಿ ಹೋಗುತ್ತಾನೆ. ಆದರೆ ಮತ್ತೆ ಊಟದ ಮೇಜಿನ ಬಳಿ ಬಂದು ಉಳಿದಿರುವ ಆಹಾರದ ಪ್ಲೇಟ್ ತೆಗೆದುಕೊಂಡು ಓಡಿ ಹೋಗ್ತಾನೆ. ಆದ್ರೆ, ಆತನ ತಂದೆ ಬಟ್ಟಲು ಅಲ್ಲೇ ಇಟ್ಟು ಬರುವಂತೆ ಹೇಳ್ತಾರೆ. ಆದ್ರೆ ಹಸಿದ-ಹಠಮಾರಿ ಬಾಲಕ ಆಹಾರವನ್ನ ಮೇಜಿನ ಮೇಲಿಟ್ಟು ಅಪ್ಪ ಕೂಗುತ್ತಿದ್ರು ಸಾಧ್ಯವಾದಷ್ಟು ಗಬಗಬನೇ ಆಹಾರ ತಿಂದು ಓಡಿ ಹೋಗುತ್ತಾನೆ.
Nothing comes between this kid and his meal not even an earthquake.
— Science girl (@gunsnrosesgirl3) June 25, 2025
‘ICC’ಯಿಂದ ‘ಸ್ಟ್ರಿಕ್ ರೂಲ್ಸ್’ ಜಾರಿ ; ‘ಟೆಸ್ಟ್, ಏಕದಿನ ಮತ್ತು ಟಿ20ಐ ಪಂದ್ಯ’ಗಳ ಮೇಲೆ ಪರಿಣಾಮ
SHOCKING : 24 ಗಂಟೆಯಲ್ಲಿ ಹಾಸನದ ಇಬ್ಬರು ‘ಹೃದಯಾಘಾತಕ್ಕೆ’ ಬಲಿ : ಒಂದೇ ತಿಂಗಳಲ್ಲಿ 14 ಜನರ ಸಾವು!