ನ್ಯೂಯಾರ್ಕ್: ಭಾರತೀಯ ಮೂಲದ ಅಮೆರಿಕನ್ ಗಾಯಕಿ ಮತ್ತು ಉದ್ಯಮಿ ಚಂದ್ರಿಕಾ ಟಂಡನ್ ಅವರು ‘ತ್ರಿವೇಣಿ’ ಆಲ್ಬಂಗಾಗಿ ಅತ್ಯುತ್ತಮ ನವಯುಗ, ಆಂಬಿಯೆಂಟ್ ಅಥವಾ ಚಾಂಟ್ ಆಲ್ಬಂ ವಿಭಾಗದಲ್ಲಿ ಗ್ರ್ಯಾಮಿ ಪ್ರಶಸ್ತಿಯನ್ನು ಗೆದ್ದಿದ್ದಾರೆ.
ರೆಕಾರ್ಡಿಂಗ್ ಅಕಾಡೆಮಿ ಆಯೋಜಿಸಿದ್ದ ಅತಿದೊಡ್ಡ ಸಂಗೀತ ಪ್ರಶಸ್ತಿ ರಾತ್ರಿಯ 67 ನೇ ಆವೃತ್ತಿಯು ಭಾನುವಾರ ಲಾಸ್ ಏಂಜಲೀಸ್ ನ ಅರೆನಾದಲ್ಲಿ ನಡೆಯಿತು.
ಜಾಗತಿಕ ವ್ಯಾಪಾರ ನಾಯಕಿ ಮತ್ತು ಪೆಪ್ಸಿಕೋದ ಮಾಜಿ ಸಿಇಒ ಇಂದ್ರಾ ನೂಯಿ ಅವರ ಹಿರಿಯ ಸಹೋದರಿಯೂ ಆಗಿರುವ ಟಂಡನ್, ತಮ್ಮ ಸಹಯೋಗಿಗಳಾದ ದಕ್ಷಿಣ ಆಫ್ರಿಕಾದ ಫ್ಲೌಟಿಸ್ಟ್ ವೂಟರ್ ಕೆಲ್ಲರ್ಮನ್ ಮತ್ತು ಜಪಾನಿನ ಸೆಲ್ಲಿಸ್ಟ್ ಎರು ಮಾಟ್ಸುಮೊಟೊ ಅವರೊಂದಿಗೆ ಈ ಪ್ರಶಸ್ತಿಯನ್ನು ಗೆದ್ದಿದ್ದಾರೆ.
“ಇದು ಅದ್ಭುತವಾಗಿದೆ” ಎಂದು ಗ್ರ್ಯಾಮಿ ಪ್ರಶಸ್ತಿ ಗೆದ್ದ ನಂತರ ರೆಕಾರ್ಡಿಂಗ್ ಅಕಾಡೆಮಿಗೆ ನೀಡಿದ ಸಂದರ್ಶನದಲ್ಲಿ ಚೆನ್ನೈನಲ್ಲಿ ಬೆಳೆದ ಸಂಗೀತಗಾರ್ತಿ ಹೇಳಿದರು.