ನವದೆಹಲಿ : ಭಾರತದ 15 ನಗರಗಳ ಮೇಲೆ ದಾಳಿ ಮಾಡಲು ಪಾಕಿಸ್ತಾನ ಪ್ಲ್ಯಾನ್ ಮಾಡಿದ್ದು, ಆದರೆ ಭಾರತೀಯ ಸೇನೆಯು ಇದನ್ನು ವಿಫಲಗೊಳಿಸಿದೆ. ಪಾಕಿಸ್ತಾನದ ಡಿಫೆನ್ಸ್ ಸಿಸ್ಟಮ್ HQ-9 ಧ್ವಂಸಗೊಳಿಸಿದೆ.
ಬಟಿಂಡ್, ಚಂಡೀಗಢ್, ಶ್ರೀನಗರ, ಪಠಾಣ್ ಕೋಟ್, ಜಮ್ಮು ಸೇರಿದಂತೆ 15 ಕ್ಕೂ ಹೆಚ್ಚು ನಗರಗಳ ಮೇಲೆ ದಾಳಿ ಮಾಡಲು ಪಾಕಿಸ್ತಾನ ಸೇನೆ ಯತ್ನಿಸಿದ್ದು, ಆದರೆ ಭಾರತೀಯ ಸೇನೆ ಪಾಕಿಸ್ತಾನದ ಕ್ಷಿಪಣಿಗಳ ಮೇಲೆ ತಕ್ಕ ಪ್ರತ್ಯುತ್ತರ ನಡೆಸಿ ಪಾಕಿಸ್ತಾನದ ಯತ್ನವನ್ನು ವಿಫಲಗೊಳಿಸಿದೆ.
ಈ ಬಗ್ಗೆ ಭಾರತೀಯ ಸೇನೆ ಮಾಹಿತಿ ಹಂಚಿಕೊಂಡಿದ್ದು, ನಮ್ಮ ಡಿಫೈನ್ಸ್ S-400 ಸಿಸ್ಟಮ್ ಬಳಸಿ ಪಾಕಿಸ್ತಾನದ ಡ್ರೋನ್ ಗಳನ್ನು ಹೊಡೆದುರುಳಿಸಲಾಗಿದೆ ಎಂದು ತಿಳಿಸಿದೆ