ಶ್ರೀನಗರ : ಜಮ್ಮುಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಉಗ್ರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಕಾರ್ಯಾಚರಣೆ ನಡೆಸುತ್ತಿದ್ದು, ಮತ್ತೊಬ್ಬ ಉಗ್ರನ ಮನೆ ಧ್ವಂಸ ಮಾಡಿದೆ.
ಹೌದು, ಪಹಲ್ಗಾಮ್ ನರಮೇಧಕ್ಕೆ ಭಾರತೀಯ ಸೇನೆಯಿಂದ ಪ್ರತೀಕಾರ ತೀರಿಸಿಕೊಳ್ಳುತ್ತಿದ್ದು, ಕಾಶ್ಮೀರದಲ್ಲಿ ಸೇನಾ ಕಾರ್ಯಾಚರಣೆ ಮತ್ತಷ್ಟು ತೀವ್ರಗೊಂಡಿದ್ದು, ಜೈಶ್ ಎ ಮೊಹಮ್ಮದ್ ಸಂಘಟನೆಯ ಉಗ್ರನ ಮನೆ ಧ್ವಂಸ ಮಾಡಿದೆ.
ಪುಲ್ವಾಮದ ಮುರ್ರಾನ್ ನಲ್ಲಿ ಅಹ್ಸಾನ್ ಮನೆ ಧ್ವಂಸ ಮಾಡಲಾಗಿದೆ. ಈಗಾಗಲೇ ಭಾರತೀಯ ಸೇನೆ ಹಲವು ಉಗ್ರರನ್ನು ಹುಡುಕಿ ಹುಡುಕಿ ಕೊಲ್ಲುತ್ತಿದ್ದು, ಇದೀಗ ಮತ್ತೊಬ್ಬ ಉಗ್ರನ ಮನೆ ಧ್ವಂಸ ಮಾಡಿದೆ.