ಶ್ರೀನಗರ : ಪಹಲ್ಗಾಮ್ ಉಗ್ರ ದಾಳಿ ಬಳಿಕ ಭಾರತೀಯ ಸೇನೆಯು ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದು, ಜಮ್ಮು-ಕಾಶ್ಮೀರದಲ್ಲಿ ನೆಲದಲ್ಲಿ ಹುದುಗಿಸಿಟ್ಟಿದ್ದ 5 ಐಇಡಿ ವಶಕ್ಕೆ ಪಡೆದಿದೆ.
ಜಮ್ಮು-ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಭಾರತೀಯ ಸೇನೆಯ ಕಾರ್ಯಾಚರಣೆ ನಡೆಸುತ್ತಿದ್ದು, ಈ ವೇಳೆ 3 ಐಇಡಿ ಟಿಫನ್ ಬಾಕ್ಸ್, 2 ಐಇಡಿ ಬಾಕ್ಸ್ ಪತ್ತೆಯಾಗಿದ್ದು ಇವುಗಳನ್ನು ಭಾರತೀ ಸೇನೆ ವಶಕ್ಕೆ ಪಡೆದುಕೊಂಡಿದೆ. ಪೂಂಚ್ ಜಿಲ್ಲೆಯ ಸೂರಾನ್ ಕೋಟ್ ನಲ್ಲಿ ಭಾರತೀಯ ಸೇನೆಯು ಉಗ್ರರ ವಿರುದ್ಧ ಆಪರೇಷನ್ ನಡೆಸುತ್ತಿದೆ.