ನವದೆಹಲಿ : ಭಾರತವು ಆಸಿಯಾನ್’ಗೆ ಆದ್ಯತೆ ನೀಡುತ್ತದೆ ಮತ್ತು 2025ರಲ್ಲಿ ಮಲೇಷ್ಯಾದ “ಯಶಸ್ವಿ ಆಸಿಯಾನ್ ಅಧ್ಯಕ್ಷತ್ವ”ಕ್ಕೆ ಸಂಪೂರ್ಣ ಬೆಂಬಲವನ್ನ ನೀಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದ್ದಾರೆ.
ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಅವರೊಂದಿಗಿನ ಸಭೆಯ ನಂತರ ಪ್ರಧಾನಿ ಮೋದಿ ಪತ್ರಿಕಾಗೋಷ್ಠಿ ನಡೆಸಿದರು.
ಪಿಎಂ ಮೋದಿ “ಭಾರತವು ಆಸಿಯಾನ್ ಕೇಂದ್ರೀಕರಣಕ್ಕೆ ಆದ್ಯತೆ ನೀಡುತ್ತದೆ. ಭಾರತ ಮತ್ತು ಆಸಿಯಾನ್ ನಡುವಿನ ಎಫ್ ಟಿಎ ಪರಾಮರ್ಶೆಯನ್ನ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು ಎಂದು ನಾವು ಒಪ್ಪುತ್ತೇವೆ. 2025ರಲ್ಲಿ ಮಲೇಷ್ಯಾದ ಯಶಸ್ವಿ ಆಸಿಯಾನ್ ಅಧ್ಯಕ್ಷತೆಗೆ ಭಾರತ ಸಂಪೂರ್ಣ ಬೆಂಬಲ ನೀಡಲಿದೆ. ಅಂತರರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿ ನೌಕಾಯಾನ ಮತ್ತು ಓವರ್ ಫ್ಲೈಟ್ ಸ್ವಾತಂತ್ರ್ಯ ಮತ್ತು ಎಲ್ಲಾ ವಿವಾದಗಳನ್ನು ಶಾಂತಿಯುತವಾಗಿ ಪರಿಹರಿಸಲು ನಾವು ಬದ್ಧರಾಗಿದ್ದೇವೆ ” ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಉಭಯ ದೇಶಗಳ ನಡುವಿನ ಹಳೆಯ ಬಾಂಧವ್ಯವನ್ನು ಸ್ಮರಿಸಿದ ಪ್ರಧಾನಿ, ಕಳೆದ ವರ್ಷ ಮಲೇಷ್ಯಾದಲ್ಲಿ ನಡೆದ ‘ಪಿಐಒ ದಿನ’ ಅತ್ಯಂತ ಯಶಸ್ವಿ ಮತ್ತು ಜನಪ್ರಿಯ ಕಾರ್ಯಕ್ರಮವಾಗಿತ್ತು ಎಂದರು.
ಭಾರತೀಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರ (ITEC) ಕಾರ್ಯಕ್ರಮದ ಅಡಿಯಲ್ಲಿ ಮಲೇಷಿಯನ್ನರಿಗೆ 100 ಸೀಟುಗಳನ್ನು ವಿಶೇಷವಾಗಿ ಹಂಚಿಕೆ ಮಾಡಲಾಗುವುದು ಎಂದು ಅವರು ಘೋಷಿಸಿದರು.
ವೈದ್ಯೆ ಅತ್ಯಾಚಾರ-ಕೊಲೆ ಪ್ರಕರಣ: ಮೃತರ ಹೆಸರು, ಫೋಟೋ, ವಿಡಿಯೋ ತೆಗೆದುಹಾಕಲು ಸುಪ್ರೀಂ ಕೋರ್ಟ್ ಆದೇಶ
ರಾಜ್ಯದಲ್ಲಿ ‘ತೈವಾನ್’ನ ಬೆಸ್ಟ್ ಸಮೂಹದಿಂದ 200 ಕೋಟಿ ಹೂಡಿಕೆ: 5,000 ಉದ್ಯೋಗ ಸೃಷ್ಠಿ