ನವದೆಹಲಿ : ಭಾರತ ಮತ್ತು ಚೀನಾ ಮುಂದಿನ ತಿಂಗಳು ನೇರ ವಿಮಾನ ಸಂಪರ್ಕವನ್ನ ಪುನರಾರಂಭಿಸಲಿವೆ ಎಂದು ವರದಿಯಾಗಿದೆ. ಆಗಸ್ಟ್ 28 ರಂದು ಟಿಯಾಂಜಿನ್’ನಲ್ಲಿ ನಡೆಯಲಿರುವ SCO ಶೃಂಗಸಭೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಚೀನಾಕ್ಕೆ ಭೇಟಿ ನೀಡಲಿರುವ ಕೆಲವು ದಿನಗಳ ಮೊದಲು ಈ ಕ್ರಮ ಕೈಗೊಳ್ಳಲಾಗಿದೆ.
ಭಾರತ-ಚೀನಾ ನೇರ ವಿಮಾನ ಪುನರಾರಂಭ ಏಕೆ ಮಹತ್ವದ್ದಾಗಿದೆ?
ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ 2020 ರ ಆರಂಭದಿಂದ ಎರಡು ಏಷ್ಯಾದ ರಾಷ್ಟ್ರಗಳ ನಡುವಿನ ನೇರ ವಾಣಿಜ್ಯ ವಿಮಾನಗಳನ್ನು ಸ್ಥಗಿತಗೊಳಿಸಲಾಗಿದೆ. ಅಂದಿನಿಂದ, ಪ್ರಯಾಣಿಕರು ಹಾಂಗ್ ಕಾಂಗ್, ಸಿಂಗಾಪುರ ಅಥವಾ ಬ್ಯಾಂಕಾಕ್‌ನಂತಹ ಪ್ರಾದೇಶಿಕ ಕೇಂದ್ರಗಳ ಮೂಲಕ ಸಾಗಬೇಕಾಯಿತು, ಇದು ಪ್ರಯಾಣದ ಸಮಯ ಮತ್ತು ವೆಚ್ಚವನ್ನು ಗಮನಾರ್ಹವಾಗಿ ಹೆಚ್ಚಿಸಿದೆ.
ವರದಿಯ ಪ್ರಕಾರ, ಭಾರತದ ನಾಗರಿಕ ವಿಮಾನಯಾನ ಅಧಿಕಾರಿಗಳು ಏರ್ ಇಂಡಿಯಾ ಮತ್ತು ಇಂಡಿಗೊದಂತಹ ದೇಶೀಯ ವಿಮಾನಯಾನ ಸಂಸ್ಥೆಗಳಿಗೆ ಚೀನಾಕ್ಕೆ ವಿಮಾನಗಳನ್ನ ಕಡಿಮೆ ಸಮಯದಲ್ಲಿ ಸಿದ್ಧಪಡಿಸುವಂತೆ ಸೂಚನೆ ನೀಡಿದ್ದಾರೆ ಎಂದು ಅಧಿಕಾರಿಗಳನ್ನ ಉಲ್ಲೇಖಿಸಿ ವರದಿ ಮಾಡಿದೆ.
“ರಾಮನಿಗೆ ಮತಿ ಭ್ರಮಣೆಯಾಗಿತ್ತು” ; ತಮಿಳುನಾಡು ಕವಿಯಿಂದ ವಿವಾದಾತ್ಮಕ ಹೇಳಿಕೆ
ಶೀಘ್ರದಲ್ಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಂಪುಕಲ್ಲು ಗಣಿಗಾರಿಕೆಗೆ ಹೊಸ ನಿಯಮ ಜಾರಿ: ಸಚಿವ ದಿನೇಶ್ ಗುಂಡೂರಾವ್
ಇತಿಹಾಸ ಸೃಷ್ಟಿಸಿದ ‘ಶುಭಮನ್ ಗಿಲ್’ ; ‘ICC’ಯ ಈ ಗೌರವ ಪಡೆದ ವಿಶ್ವದ ಮೊದಲ ಕ್ರಿಕೆಟಿಗ ಹೆಗ್ಗಳಿಕೆ