ಶಿವಮೊಗ್ಗ : ಶಿವಮೊಗ್ಗ ಲೋಕಸಭೆ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ನನ್ನ ಸ್ಪರ್ಧೆ ಖಚಿತ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಪಕ್ಷ ತಂದೆ, ಮಕ್ಕಳ ಕೈಗಗೆ ಸಿಕ್ಕಿದೆ. ಇದರಿಂದ ಕಾರ್ಯಕರ್ತರು ಪರದಾಡುವಂತಾಗಿದೆ. ಪಕ್ಷ ಉಳಿಸಲು ನನ್ನ ಹೋರಾಟ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ನನಗೆ ಕೊಡಲಿಲ್ಲ. ಲಿಂಗಾಯ ಶಾಸಕ ಬಸನಗೌಡ ಪಾಟೀಲ್, ಒಕ್ಕಲಿಗ ನಾಯಕ ಸಿ.ಟಿ ರವಿಗೆ ಯಾಕೆ ಕೊಡಲಿಲ್ಲ. ಸಂಘಟನೆ ದೃಷ್ಟಿಯಿಂದ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ನೀಡಬೇಕಿತ್ತು ಎಂದರು.
ನಾನು ಹಿಂದುತ್ವದ ವಿಚಾರದ ಮೇಲೆ ರಾಜಕಾರಣ ಮಾಡುತ್ತೇನೆ. ರಾಘವೇಂದ್ರ ಲಿಂಗಾಯತ ಅಂತಾ ಚುನಾವಣೆ ಮಾಡುತ್ತಾರೆ. ಅವರಿಗೆ ಮಾತ್ರ ಲಿಂಗಾಯತರು ಸೀಮಿತವಾಗಿಲ್ಲ ಎಂದು ಹೇಳಿದರು.