ಬೆಂಗಳೂರು : ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಇತರರಿಗೆ ಜಾಮೀನು ನೀಡಿದ ಹೈಕೋರ್ಟ್ ನಿರ್ಧಾರವನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಅರ್ಜಿಯ ಮೇಲಿನ ತೀರ್ಪನ್ನು ಸುಪ್ರೀಂ ಕೋರ್ಟ್ ಗುರುವಾರ ಕಾಯ್ದಿರಿಸಿದ್ದು, ನಟಿ ರಮ್ಯಾ ಅವರು ಮಾಡಿರುವ ಪೋಸ್ಟ್ ವೊಂದು ವೈರಲ್ ಆಗಿದೆ.
ನಟಿ ರಮ್ಯಾ ಅವರು, ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬಹುದು ಎಂದು ನಾನು ನಂಬಿದ್ದೇನೆ. ಭಾರತದ ಸಾಮಾನ್ಯ ಪ್ರಜೆಗೂ ಸುಪ್ರೀಂ ಕೋರ್ಟ್ ಆಶಾಕಿರಣ ಎಂದು ಇನ್ಸ್ಟಾದಲ್ಲಿ ಸ್ಟೇಟಸ್ ಹಾಕಿದ್ದಾರೆ. ರಮ್ಯಾ ಬರೆದುಕೊಂಡಿರುವ ಪೋಸ್ಟ್ ಬಗ್ಗೆ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಸುಪ್ರೀಂ ಕೋರ್ಟ್ ನಲ್ಲಿ ನಡೆದ ವಿಚಾರಣೆಯ ಬಗ್ಗೆಯ ಪೋಸ್ಟ್ ಹಾಕಿದ್ದಾರೆ.
ನಟ ದರ್ಶನ್ ಮತ್ತು ಇತರರಿಗೆ ಜಾಮೀನು ನೀಡಿ ಹೈಕೋರ್ಟ್ ಆದೇಶ ನೀಡಿದ ರೀತಿಯನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ. ಸುಪ್ರೀಂ ಕೋರ್ಟ್ ಗಂಭೀರ ಕಳವಳ ವ್ಯಕ್ತಪಡಿಸಿ, “ಹೈಕೋರ್ಟ್ನ ವಿಧಾನವು ನಮಗೆ ತೊಂದರೆ ನೀಡುತ್ತಿದೆ” ಎಂದು ಹೇಳಿದೆ. ಹೈಕೋರ್ಟ್ ನ್ಯಾಯಾಧೀಶರ ತಿಳುವಳಿಕೆಯನ್ನು ಮತ್ತಷ್ಟು ಪ್ರಶ್ನಿಸಿ, ಇದನ್ನು “ವಿವೇಚನೆಯ ವಿಕೃತ ವ್ಯಾಯಾಮದ ಪ್ರಶ್ನೆ” ಎಂದು ಕರೆದಿದೆ.
ನಾವು ವಿವೇಚನೆಯನ್ನು ಚಲಾಯಿಸುವಾಗ ಹೈಕೋರ್ಟ್ ತನ್ನ ಮನಸ್ಸನ್ನು ವಿವೇಚನೆಯಿಂದ ಬಳಸಿದೆಯೇ ಎಂದು ಪರಿಶೀಲಿಸಲು ಪ್ರಯತ್ನಿಸುತ್ತಿದ್ದೇವೆ; ಅದು ನಮ್ಮ ಕಾಳಜಿ” ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಪವಿತ್ರಾ ಅವರ ವಕೀಲರನ್ನು ಉದ್ದೇಶಿಸಿ ನ್ಯಾಯಾಲಯ, “ಇದೆಲ್ಲವೂ ನಿಮ್ಮಿಂದಾಗಿ ಸಂಭವಿಸಿದೆ. ನೀವು ಸಮಸ್ಯೆಗೆ ಮೂಲ ಕಾರಣ” ಎಂದು ಹೇಳಿದೆ. ನಾವು ಎಲ್ಲವನ್ನೂ ಪರಿಶೀಲಿಸುತ್ತೇವೆ ಮತ್ತು ನಿರ್ಧಾರ ತೆಗೆದುಕೊಳ್ಳುತ್ತೇವೆ” ಎಂದು ಸುಪ್ರೀಂ ಕೋರ್ಟ್ ಭರವಸೆ ನೀಡಿತು. “ನಾವು ಹೈಕೋರ್ಟ್ ಮಾಡಿದಂತೆಯೇ ಅದೇ ತಪ್ಪನ್ನು ಮಾಡುವುದಿಲ್ಲ ಎಂದು ಎಚ್ಚರಿಸಿತು.