ಹುಬ್ಬಳ್ಳಿ : ಅಪರಿಚಿತ ವ್ಯಕ್ತಿ ಒಬ್ಬನಿಂದ ಹುಬ್ಬಳ್ಳಿ ವಿಮಾನ ನಿಲ್ದಾಣ ನಿರ್ದೇಶಕರಿಗೆ ಜೀವ ಬೆದರಿಕೆ ಇ-ಮೇಲ್ ಸಂದೇಶ ಬಂದಿದ್ದು, ವಿಮಾನ ನಿಲ್ದಾಣ ನಿರ್ದೇಶಕ ರೂಪೇಶ್ ಕುಮಾರ್ ಗೆ ಬೆದರಿಕೆ ಮೆಲ್ ಸಂದೇಶ ಬಂದಿದೆ ಎಂದು ತಿಳಿದುಬಂದಿದೆ.

ವ್ಯಕ್ತಿ ಒಬ್ಬನಿಂದ ಇ-ಮೇಲ್ ಮೂಲಕ ಜೀವ ಬೆದರಿಕೆಯ ಸಂದೇಶ ಬಂದಿದೆ. ನಿರ್ದೇಶಕರ ಕಚೇರಿಯ ಮೆಲ್ ಐಡಿಗೆ ಈ ಒಂದು ಬೆದರಿಕೆ ಸಂದೇಶ ಬಂದಿದೆ ಎಂದು ಹೇಳಲಾಗುತ್ತಿದೆ. ಲಾಂಗ್ ಲೀವ್ ಪ್ಯಾಲೆಸ್ತೀನ್ ಎಂಬ ಹೆಸರಿನ ಮೇಲ್ ನಿಂದ ಬೆದರಿಕೆ ಸಂದೇಶ ಬಂದಿದೆ.

ನಾವು ನಿಮ್ಮನ್ನು ನಾಶ ಮಾಡುತ್ತೇವೆ. ನೀವು ಮಾಡಿದ ಎಲ್ಲಾ ಕೆಟ್ಟ ಕೆಲಸಗಳಿಗೆ ಉತ್ತರವಿಲ್ಲ ಎಂದು ಭಾವಿಸಿದ್ದೀರಾ ಬೆಂಕಿಯಲ್ಲಿ ಎಸುತ್ತೇವೆ ಉಸಿರುಗಟ್ಟಿ ಸಾಯುತ್ತೀರಾ ಎಂದು ಸಂದೇಶ ಬಂದಿದ್ದು, ಈ ವಿಚಾರವನ್ನು ರೂಪೇಶ್ ಕುಮಾರ್ ಅವರು ಟರ್ಮಿನಲ್ ಉಸ್ತುವಾರಿ ಗಮನಕ್ಕೆ ತಂದಿದ್ದಾರೆ.

Share.
Exit mobile version