ದಾವಣಗೆರೆ : ಕೆರೆ ಕೋಡಿ ಬಿದ್ದು ಮನೆ ಮುಂದೆ ಬಂದ ನೀರಿನಲ್ಲಿ ಕೊಚ್ಚಿ ಹೋಗಿ 1 ವರ್ಷದ ಮಗು ದುರಂತ ಸಾವನ್ನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಹಿರೇಮಲ್ಲನಹಳ್ಳಿಯಲ್ಲಿ ನಡೆದಿದೆ.
ಹಿರೇಮಲ್ಲನಹಳ್ಳಿಯಲ್ಲಿ ಮಳೆಗೆ ಕೆರೆ ಕೋಡಿ ತುಂಬಿ ಮನೆ ಮುಂದೆ ನೀರು ಬಂದಿದ್ದು, ಈ ವೇಳೆ ಮನೆ ಮುಂದೆ ಆಟವಾಡುತ್ತಿದ್ದ 1 ವರ್ಷದ ಮಗು ನೀರಿನಲ್ಲಿ ಕೊಚ್ಚಿ ಹೋಗಿ ಸಾವನ್ನಪ್ಪಿದೆ.
ಗ್ರಾಮದ ಸುನೀಲ್, ರೂಪ ದಂಪತಿಯ ಮಗು ಗಗನ್ ಸಾವನ್ನಪ್ಪಿದ್ದು, ಸ್ಥಳಕ್ಕೆ ಜಗಳೂರು ಶಾಸಕರು ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ.