ಚಿಕ್ಕಮಗಳೂರು : ಮಗ ನದಿಯಲ್ಲಿ ಕೊಚ್ಚಿ ಹೋದ ವಿಷಯ ತಿಳಿದು ತಾಯಿಯೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಳೂಕಿನ ಗಣಪತಿಕಟ್ಟೆ ಗ್ರಾಮದಲ್ಲಿ ಮಗ ನದಿಯಲ್ಲಿ ಕೊಚ್ಚಿ ಹೋದ ವಿಷಯ ತಿಳಿದು ತಾಯಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಮನೆಯ ಹಿಂಭಾಗದ ಕೆರೆಗೆ ಹಾರಿ ತಾಯಿ ರವಿಕಲಾ (40) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆರೆಯಿಂದ ಮೃತ ದೇಹ ಹೊರ ತೆಗೆಯಾಗಿದೆ. ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಭದ್ರಾ ನದಿಗೆ ಪಿಕಪ್ ವಾಹನ ಬಿದ್ದು ರವಿಕಲಾ ಅವರ ಮಗ ಸಮಂತ್ ಸಾವನ್ನಪ್ಪಿದ್ದ. ಕಳಸ ತಾಲೂಕಿನ ಕೊಳಮಗೆ ಗ್ರಾಮದಲ್ಲಿ ಘಟನೆ ನಡೆದಿತ್ತು. ಮಗನ ವಿಚಾರ ತಿಳಿದು ತಾಯಿ ಆತ್ಮಹತಯ್ಎ ಮಾಡಿಕೊಂಡಿದ್ದಾರೆ. ಕಳಸಾ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.