ಬೆಂಗಳೂರು : 545 ಪಿಎಸ್ ಐ ನೇಮಕಾತಿ ಪಟ್ಟಿ ವಿಚಾರವಾಗಿ ಇಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರನ್ನು ಭೇಟಿಗೆ ಬಂದಿದ್ದ ಆಕಾಂಕ್ಷಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರಿನ ಗೃಹ ಸಚಿವ ಪರಮೇಶ್ವರ್ ನಿವಾಸದಲ್ಲಿ ಹೈಡ್ರಾಮಾ ನಡೆದಿದ್ದು, ಅನುಮತಿ ಪಡೆಯದೇ ಗೃಹ ಸಚಿವರ ಮನೆಗೆ ಬಂದಿದ್ದ ಪಿಎಸ್ ಐ ಆಕಾಂಕ್ಷಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
545 ಪಿಎಸ್ ಐ ನೇಮಕಾತಿ ಪಟ್ಟಿ ವಿಚಾರವಾಗಿ ಮಾತನಾಡಲು ಬಂದಿದ್ದ ಇಬ್ಬರು ಪಿಎಸ್ ಐ ಆಕಾಂಕ್ಷಿಗಳು ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದು, ಈ ವೇಳೆ ಅವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.