ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟವಾಗಿದೆ. ಪರೀಕ್ಷೆಗೆ ಹಾಜರಾದಂತ 6,37,805 ವಿದ್ಯಾರ್ಥಿಗಳಲ್ಲಿ 4,68,439 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಒಟ್ಟಾರೆ ಶೇಕಡವಾರು ಪ್ರಮಾಣ 73.45ರಷ್ಟು ಆಗಿದೆ. ಹಾಗಾದ್ರೇ ಜಿಲ್ಲಾವಾರು ಫಲಿತಾಂಶದ ಮಾಹಿತಿ ಮುಂದಿದೆ ಓದಿ.
ದ್ವಿತೀಯ ಪಿಯುಸಿ ಪರೀಕ್ಷೆ-1 ಅನ್ನು ದಿನಾಂಕ 01-03-2025ರಿಂದ 20-03-2025ರವರೆಗೆ ಒಟ್ಟು 1.171 ಪರೀಕ್ಷಾ ಕೇಂದ್ರಗಳಲ್ಲಿ ರಾಜ್ಯಾಧ್ಯಂತ ನಡೆಸಲಾಯಿತು. ಉತ್ತರ ಪತ್ರಿಕೆಗಳ ಮೌಲ್ಯ ಮಾಪನ ಕಾರ್ಯವನ್ನು 76 ಮೌಲ್ಯಮಾಪನ ಕೇಂದ್ರಗಳಲ್ಲಿ ದಿನಾಂಕ 21-03-2025ರಿಂದ 02-04-2025ರವರೆಗೆ 28,092 ಮೌಲ್ಯ ಮಾಪಕರಿಂದ ನಡೆಸಲಾಯಿತು.
ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶವನ್ನು https://karresults.nic.in ಜಾಲತಾಣದಲ್ಲಿ ಪ್ರಕಟಿಸಲಾಗಿದೆ. ಎಲ್ಲಾ ಕಾಲೇಜುಗಳಲ್ಲಿ ಫಲಿತಾಂಶವನ್ನು ಇಂದ ಮಧ್ಯಾಹ್ನ 1.30 ಗಂಟೆಗಳ ನಂತ್ರ ಪ್ರಕಟಿಸಲಾಗುತ್ತದೆ.
ಹೀಗಿದೆ ಜಿಲ್ಲಾವಾರು ಶೇಕಡವಾರು ಉತ್ತೀರ್ಣ ಫಲಿತಾಂಶ
- ಉಡುಪಿ – ಶೇ.93.90
- ದಕ್ಷಿಣ ಕನ್ನಡ – ಶೇ.93.57
- ಬೆಂಗಳೂರು ದಕ್ಷಿಣ – ಶೇ.85.36
- ಕೊಡಗು – ಶೇ.83.84
- ಬೆಂಗಳೂರು ಉತ್ತರ – ಶೇ.83.31
- ಉತ್ತರ ಕನ್ನಡ – ಶೇ.82.93
- ಶಿವಮೊಗ್ಗ – ಶೇ.79.91
- ಬೆಂಗಳೂರು ಗ್ರಾಮಾಂತರ – ಶೇ.79.70
- ಚಿಕ್ಕಮಗಳೂರು – ಶೇ.79.56
- ಹಾಸನ – ಶೇ.77.56
- ಚಿಕ್ಕಬಳ್ಳಾಪುರ – ಶೇ.75.80
- ಮೈಸೂರು- ಶೇ.74.30
- ಚಾಮರಾಜನಗರ- ಶೇ.73.27
- ಬಾಗಲಕೋಟೆ – ಶೇ.72.83
- ಕೋಲಾರ – ಶೇ.72.45
- ಧಾರವಾಡ- ಶೇ.72.32
- ತುಮಕೂರು – ಶೇ.72.02
- ರಾಮನಗರ – ಶೇ.69.71
- ದಾವಣಗೆರೆ – ಶೇ.69.45
- ಹಾವೇರಿ- ಶೇ.67.56
- ಬೀದರ್ – ಶೇ.67.31
- ಕೊಪ್ಪಳ – ಶೇ.67.20
- ಚಿಕ್ಕೋಡಿ – ಶೇ.66.76
- ಗದಗ – ಶೇ.66.64
- ಬೆಳಗಾವಿ – ಶೇ.65.37
- ಬಳ್ಳಾರಿ – ಶೇ.64.41
- ಚಿತ್ರದುರ್ಗ – ಶೇ.59.87
- ವಿಜಯಪುರ – ಶೇ.58.81
- ರಾಯಚೂರು- ಶೇ.58.75
- ಕಲಬುರ್ಗಿ- ಶೇ.55.70
- ಯಾದಗಿರಿ – ಶೇ.48.45