ನವದೆಹಲಿ : ಜಾರ್ಖಂಡ್’ನ ಇತ್ತೀಚಿನ ರಾಜಕೀಯ ಬೆಳವಣಿಗೆಯಲ್ಲಿ, ಎನ್ಡಿಎ ಮೈತ್ರಿಕೂಟದ ನಾಯಕರು ಗುರುವಾರ ರಾಜ್ಯಪಾಲ ಸಿ.ಪಿ ರಾಧಾಕೃಷ್ಣನ್ ಅವರನ್ನ ಭೇಟಿಯಾದರು. ಜೆಎಂಎಂ ಕಾರ್ಯಕಾರಿ ಅಧ್ಯಕ್ಷ ಹೇಮಂತ್ ಸೊರೆನ್, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಠಾಕೂರ್ ಮತ್ತು ಆರ್ಜೆಡಿ ನಾಯಕ ಸತ್ಯಾನಂದ್ ಭೋಕ್ತಾ ರಾಜಭವನಕ್ಕೆ ತೆರಳಿದರು. ರಾಜ್ಯಪಾಲ ಸಿ.ಪಿ ರಾಧಾಕೃಷ್ಣನ್ ಅವರು ಜಾರ್ಖಂಡ್ನಲ್ಲಿ ಸರ್ಕಾರ ರಚಿಸಲು ಹೇಮಂತ್ ಸೊರೆನ್ ಅವರನ್ನ ಆಹ್ವಾನಿಸಿದ್ದಾರೆ ಎಂದು ರಾಜಭವನದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜೆಎಂಎಂನ ಪ್ರಧಾನ ಕಾರ್ಯದರ್ಶಿ ಸುಪ್ರಿಯೋ ಭಟ್ಟಾಚಾರ್ಯ ಮಾತನಾಡಿ, “ರಾಜ್ಯಪಾಲರು ನಮ್ಮನ್ನು ಸರ್ಕಾರ ರಚಿಸಲು ಮತ್ತು ಪ್ರಮಾಣವಚನ ಸ್ವೀಕರಿಸಲು ಆಹ್ವಾನಿಸಿದ್ದಾರೆ. ಈ ಕ್ಯಾಬಿನೆಟ್ನೊಂದಿಗೆ ಸಿಎಂ ಜುಲೈ 7 ರಂದು ಪ್ರಮಾಣವಚನ ಸ್ವೀಕರಿಸಲು ನಾವು ನಿರ್ಧರಿಸಿದ್ದೇವೆ” ಎಂದು ಅವರು ಹೇಳಿದರು.
महामहिम राज्यपाल महोदय का धन्यवाद।
विरोधियों द्वारा रची गई लोकतंत्र विरोधी साज़िश के अंत की शुरुआत हो गई है।
सत्यमेव जयते। pic.twitter.com/TSe2PRqp1w
— Hemant Soren (@HemantSorenJMM) July 4, 2024
ಜಾರ್ಖಂಡ್ ಮುಖ್ಯಮಂತ್ರಿ ಚಂಪೈ ಸೊರೆನ್ ಬುಧವಾರ ರಾಜೀನಾಮೆ ನೀಡಿದರು ಮತ್ತು ಮನಿ ಲಾಂಡರಿಂಗ್ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಹೇಮಂತ್ ಸೊರೆನ್ ಅವರು ಸರ್ಕಾರ ರಚಿಸಲು ಹಕ್ಕು ಮಂಡಿಸಿದರು.
10 ನಗರಗಳಲ್ಲಿ ಶೇ.7ರಷ್ಟು ಸಾವುಗಳಿಗೆ ವಾಯುಮಾಲಿನ್ಯ ಕಾರಣ: ಲ್ಯಾನ್ಸೆಟ್ ಅಧ್ಯಯನ
‘ಮುಡಾ’ ಅಕ್ರಮ ಆರೋಪ : ಬಿಜೆಪಿಗರು ‘RSS’ ಹೇಳಿದಂತೆ ಕೇಳುತ್ತಿದ್ದಾರೆ : ಸಿಎಂ ಸಿದ್ದರಾಮಯ್ಯ ವಾಗ್ದಾಳಿ
ಬೆಂಗಳೂರಲ್ಲಿ ಆಟೋ, ಕ್ಯಾಬ್ ಚಾಲಕರ ಬೃಹತ್ ಪ್ರತಿಭಟನೆ : ‘RTO’ ಕಚೇರಿಗೆ ಮುತ್ತಿಗೆ ಹಾಕಿ ಹೈಡ್ರಾಮಾ