ಧಾರವಾಡ : ರಾತ್ರಿ ಒಟ್ಟಿಗೆ ಊಟ ಮಾಡಿದ ವೃದ್ಧ ದಂಪತಿ ಬೆಳಗ್ಗೆ ಸಾವಿನಲ್ಲೂ ಒಂದಾಗಿರುವ ಘಟನೆ ಧಾರವಾಡದ ದೇವರ ಹುಬ್ಬಳ್ಳಿ ಗ್ರಾಮದಲ್ಲಿ ನಡೆದಿದೆ.
ಧಾರವಾಡ ಸಮೀಪದ ದೇವರ ಹುಬ್ಬಳ್ಳಿ ಗ್ರಾಮದ ರೈತ ಕುಟುಂಬದ ದಂಪತಿಗಳಾದ ಈಶ್ವರ ಆರೇರ (82 ) ಹಾಗೂ ಅವರ ಪತ್ನಿ ಪಾರವ್ವಾ ಆರೇರ(73) ಇಂದು ಬೆಳಗಿನ ಜಾವ ತಮ್ಮನಿವಾಸದಲ್ಲಿಯೆ ನಿಧನರಾಗಿದ್ದಾರೆ.
ಈಶ್ವರ ಹಾಗೂ ಅವರ ಪತ್ನಿ ವಯೋಸಹಜ ಖಾಯಿಯಿಂದ ಬಳಲುತ್ತಿದ್ದರು. ರಾತ್ರಿ ಊಟ ಮಾಡಿ ಮಲಗಿದ್ದ ದಂಪತಿ ಬೆಳಗ್ಗೆ ಏಳಲೇ ಇಲ್ಲ. ಮಕ್ಕಳು ಅಪ್ಪ- ಅಮ್ಮನನ್ನು ಎಬ್ಬಿಸಲು ಹೋದಾಗ ಇಬ್ಬರು ಮೃತಪಟ್ಟಿರುವುದು ತಿಳಿದುಬಂದಿದೆ.
ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ವೃದ್ದ ದಂಪತಿಗಳಿಗೆ 4 ಜನ ಮಕ್ಕಳಿದ್ದರು. ಹಿಂದಿನ ದಿನ ರಾತ್ರಿ ಊಟ ಮಾಡಿ ಒಟ್ಟಿಗೆ ಮಲಗಿದ್ದ ದಂಪತಿಗಳು ಮರು ದಿನ ಬೆಳಗ್ಗೆ ಮೃತಪಟ್ಟಿದ್ದಾರೆ. ಈ ಮೂಲಕ ದಂಪತಿಗಳಿಬ್ಬರು ಸಾವಿನಲ್ಲೂ ಒಂದಾಗಿದ್ದಾರೆ.