ವಾರಾಣಾಸಿ : ಜ್ಞಾನವಾಪಿ ಮಸೀದಿಯ ವ್ಯಾಸ್ ನೆಲಮಾಳಿಗೆಯಲ್ಲಿ ಹಿಂದೂ ಪ್ರಾರ್ಥನೆಗೆ ಅವಕಾಶ ನೀಡಿದ ವಾರಣಾಸಿ ನ್ಯಾಯಾಲಯದ ಆದೇಶಕ್ಕೆ ಮಧ್ಯಂತರ ತಡೆ ನೀಡಲು ಅಲಹಾಬಾದ್ ಹೈಕೋರ್ಟ್ ಶುಕ್ರವಾರ ನಿರಾಕರಿಸಿದೆ. ನ್ಯಾಯಾಲಯವು ತನ್ನ ಅರ್ಜಿಯನ್ನ ತಿದ್ದುಪಡಿ ಮಾಡಿ ಫೆಬ್ರವರಿ 6 ರಂದು ಹಿಂತಿರುಗುವಂತೆ ಮುಸ್ಲಿಂ ಕಡೆಯವರಿಗೆ ಸೂಚಿಸಿದೆ. ಆದ್ರೆ ಈ ನಡುವೆ ಮಸೀದಿ ಸಮಿತಿ ಸುಪ್ರೀಂಕೋರ್ಟ್ ಮೆಟ್ಟಿಲೇರಲು ಸಜ್ಜಾಗಿದೆ.
ಅಂದ್ಹಾಗೆ, ಜ್ಞಾನವಾಪಿ ಮಸೀದಿಯ ದಕ್ಷಿಣ ನೆಲಮಾಳಿಗೆಯಲ್ಲಿ ಪೂಜೆ ನಡೆಸಲು ಅನುಮತಿ ನೀಡಿದ ಜಿಲ್ಲಾ ನ್ಯಾಯಾಧೀಶರ ಆದೇಶವನ್ನ ಪ್ರಶ್ನಿಸಿ ಮಸೀದಿ ಸಮಿತಿಯು ಈ ಹಿಂದೆ ಸುಪ್ರೀಂ ಕೋರ್ಟ್’ನ್ನ ಸಂಪರ್ಕಿಸಿತ್ತು. ಆದಾಗ್ಯೂ, ಸುಪ್ರೀಂ ಬದಲಿಗೆ ಅಲಹಾಬಾದ್ ಹೈಕೋರ್ಟ್ ಸಂಪರ್ಕಿಸುವಂತೆ ಮಸೀದಿ ಸಮಿತಿಗೆ ತಿಳಿಸಲಾಯಿತು. ಸಧ್ಯ ಮುಸ್ಲಿಂ ಮತ್ತೆ ಸುಪ್ರೀಂಕೋರ್ಟ್ ಮೊರೆಯೋಗಲು ಸಿದ್ದತೆ ನಡೆಸಿದೆ ಎನ್ನುವ ಮಾಹಿತಿ ಲಭ್ಯಾಗಿವಾಗಿದೆ.
ವಾರಣಾಸಿಯ ಜ್ಞಾನವಾಪಿ ಮಸೀದಿ ಸಂಕೀರ್ಣದ ಸೀಲ್ ಮಾಡಿದ ನೆಲಮಾಳಿಗೆಯೊಳಗೆ ಹಿಂದೂ ಭಕ್ತರಿಗೆ ಪೂಜೆ ಸಲ್ಲಿಸಲು ಅವಕಾಶ ನೀಡಿದ ಆದೇಶದ ವಿರುದ್ಧ ಅರ್ಜಿ ಸಲ್ಲಿಸಿದ್ದ ಅಂಜುಮನ್ ಇಂಟೆಜಾಮಿಯಾ ಮಸೀದಿ ಸಮಿತಿಗೆ ಪರಿಹಾರ ನೀಡಲು ಅಲಹಾಬಾದ್ ಹೈಕೋರ್ಟ್ ಶುಕ್ರವಾರ ನಿರಾಕರಿಸಿದೆ.
BREAKING : ಜಾರ್ಖಂಡ್ ಮಾಜಿ ಸಿಎಂ ‘ಹೇಮಂತ್ ಸೊರೆನ್’ 5 ದಿನ ‘ED ಕಸ್ಟಡಿ’ಗೆ ನೀಡಿದ ಕೋರ್ಟ್
BREAKING: ‘ಮಾಗಡಿ MLA ಬಾಲಕೃಷ್ಣ’ ವಿರುದ್ಧ ಚುನಾವಣಾ ಆಯೋಗಕ್ಕೆ ‘JDS’ ದೂರು: ‘ಶಾಸಕತ್ವ’ ರದ್ದುತಿಗೆ ಮನವಿ
BREAKING : ದಾಖಲೆಯ ಗರಿಷ್ಠ ಮಟ್ಟಕ್ಕೆ ‘ರಿಲಯನ್ಸ್ ಷೇರುಗಳು’ : 20 ಟ್ರಿಲಿಯನ್ ತಲುಪಿದ ಮಾರುಕಟ್ಟೆ ಬಂಡವಾಳ