ಕಠ್ಮಂಡು : ನೇಪಾಳ ಕ್ರಿಕೆಟ್ ತಂಡದ ಮಾಜಿ ನಾಯಕ ಸಂದೀಪ್ ಲಾಮಿಚಾನೆ ಅವರಿಗೆ ಹೈಕೋರ್ಟ್ ಕ್ಲೀನ್ ಚಿಟ್ ನೀಡಿದ್ದು, ಮುಂಬರುವ ಟಿ20 ವಿಶ್ವಕಪ್ 2024 ರಲ್ಲಿ ತಮ್ಮ ದೇಶವನ್ನ ಪ್ರತಿನಿಧಿಸುವ ಸಾಧ್ಯತೆಯಿದೆ. ಸ್ಟಾರ್ ಕ್ರಿಕೆಟಿಗ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಅಪ್ರಾಪ್ತ ಬಾಲಕಿಯೊಬ್ಬಳು ಆರೋಪಿಸಿದ ನಂತರ ಕಠ್ಮಂಡು ಜಿಲ್ಲಾ ನ್ಯಾಯಾಲಯವು ಇತ್ತೀಚೆಗೆ ಅವ್ರಿಗೆ 8 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು.
ನೇಪಾಳ ಈಗಾಗಲೇ ತನ್ನ ಟಿ 20 ವಿಶ್ವಕಪ್ ತಂಡವನ್ನು ಪ್ರಕಟಿಸಿದೆ, ಅಲ್ಲಿ ರೋಹಿತ್ ಪೌಡೆಲ್ ತಂಡವನ್ನು ಮುನ್ನಡೆಸಲಿದ್ದಾರೆ ಆದರೆ ಐಸಿಸಿ ಮಂಡಳಿಯ ಪ್ರಕಾರ ಮೇ 25 ರವರೆಗೆ ತಮ್ಮ ತಂಡದಲ್ಲಿ ಬದಲಾವಣೆಗಳನ್ನು ಮಾಡಬಹುದು ಮತ್ತು ಆ ಕಾರಣದಿಂದಾಗಿ ಅವರು ತಮ್ಮ ರಾಷ್ಟ್ರಕ್ಕಾಗಿ ಟಿ 20 ವಿಶ್ವಕಪ್ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ.
ನೇಪಾಳ ತಂಡವು ಒಮಾನ್ನಲ್ಲಿ ನಡೆದ ಎಸಿಸಿ ಪ್ರೀಮಿಯರ್ ಕಪ್ ಮತ್ತು ಕೀರ್ತಿಪುರದಲ್ಲಿ ನಡೆಯುತ್ತಿರುವ ಟಿ20ಐ ಸರಣಿಯಲ್ಲಿ ವೆಸ್ಟ್ ಇಂಡೀಸ್ ಎ ಪಂದ್ಯಗಳಲ್ಲಿ ಪ್ರದರ್ಶನ ನೀಡಿದ ಆಟಗಾರರನ್ನ ಒಳಗೊಂಡಿದೆ.
ಐದು ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಎ ತಂಡದ ವಿರುದ್ಧ ಶತಕ ಗಳಿಸುವ ಮೂಲಕ ನಾಯಕ ಪೌಡೆಲ್ ತಂಡವನ್ನ ಮುನ್ನಡೆಸಿದರು.
‘ಅರವಿಂದ್ ಕೇಜ್ರಿವಾಲ್’ಗೆ ಮಧ್ಯಂತರ ಜಾಮೀನು ನೀಡಿದ ‘ಸುಪ್ರೀಂ’ ತೀರ್ಪಿನ ಕುರಿತು ಅಮಿತ್ ಶಾ ಪ್ರತಿಕ್ರಿಯೆ
ನಾಲ್ಕು ತಿಂಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ನವ ವಿವಾಹಿತ ಜೋಡಿ ನೇಣಿಗೆ ಶರಣು
Good News : ಉದ್ಯೋಗಿಗಳಿಗೆ ಗುಡ್ ನ್ಯೂಸ್ ; ಈಗ ಕೇವಲ 3 ದಿನದಲ್ಲಿ ‘PF ಹಣ’ ನಿಮ್ಮ ಖಾತೆ ಸೇರುತ್ತೆ!