ನವದೆಹಲಿ: ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಅವರ ವಿರುದ್ಧ ದಾಖಲಿಸಲಾಗಿರುವ ಮಾನನಷ್ಟ ಮೊಕದ್ದಮೆಯ ಬಗ್ಗೆ ನ್ಯಾಯಾಲಯವು ಪ್ರಕರಣದ ವಿಚಾರಣೆ ನಡೆಸುವ ಮೊದಲು ಅವರಿಗೆ ತಿಳಿಸುವುದು ಸೂಕ್ತ ಎಂದು ದೆಹಲಿ ಹೈಕೋರ್ಟ್ ಗುರುವಾರ ಹೇಳಿದೆ.
ಪ್ರಕರಣದ ಬಗ್ಗೆ ಭಾರತೀಯ ಪುರುಷರ ಕ್ರಿಕೆಟ್ ತಂಡದ ಮಾಜಿ ನಾಯಕನಿಗೆ ಮಾಹಿತಿ ನೀಡುವಂತೆ ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್ ಅವರು ನ್ಯಾಯಾಲಯದ ರಿಜಿಸ್ಟ್ರಿ ಮತ್ತು ವಾದಿ ಮಿಹಿರ್ ದಿವಾಕರ್ ಅವರಿಗೆ ನಿರ್ದೇಶನ ನೀಡಿದರು ಮತ್ತು ವಿಚಾರಣೆಯನ್ನ ಜನವರಿ 29ಕ್ಕೆ ಮುಂದೂಡಿದರು.
2017ರ ಒಪ್ಪಂದದ ಉಲ್ಲಂಘನೆಗೆ ಸಂಬಂಧಿಸಿದಂತೆ ಧೋನಿ ಮತ್ತು ಅವರ ಪರವಾಗಿ ಕಾರ್ಯನಿರ್ವಹಿಸುವ ಜನರು ತಮ್ಮ ವಿರುದ್ಧ ಮಾನಹಾನಿಕರ ಆರೋಪಗಳನ್ನ ಮಾಡದಂತೆ ತಡೆಯುವಂತೆ ಕೋರಿ ದಿವಾಕರ್ ಮತ್ತು ಅವರ ಪತ್ನಿ ಸೌಮ್ಯ ದಾಸ್ (ದೂರುದಾರರು) ಹೈಕೋರ್ಟ್ ಸಂಪರ್ಕಿಸಿದ್ದಾರೆ.
ಧೋನಿ ಮತ್ತು ಅರ್ಜಿದಾರರ ಒಡೆತನದ ಆರ್ಕಾ ಸ್ಪೋರ್ಟ್ಸ್ ಮ್ಯಾನೇಜ್ಮೆಂಟ್ ನಡುವೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಭಾರತ ಮತ್ತು ಜಾಗತಿಕವಾಗಿ ಕ್ರಿಕೆಟ್ ಅಕಾಡೆಮಿಗಳನ್ನು ಸ್ಥಾಪಿಸಲು ಒಪ್ಪಂದವಾಗಿತ್ತು.
BREAKING : ರಾಮ ಮಂದಿರ ಉದ್ಘಾಟನೆ : ಜ.22ರಂದು ‘ಸರ್ಕಾರಿ ಕಚೇರಿ’ಗಳಿಗೆ ‘ಅರ್ಧ ದಿನ ರಜೆ’ ಘೋಷಿಸಿದ ಕೇಂದ್ರ ಸರ್ಕಾರ
ಸದ್ಯದಲ್ಲೇ ಪೆಟ್ರೋಲ್, ಡೀಸೆಲ್ ದರ 5 ರಿಂದ 10 ರೂ. ಇಳಿಕೆ ಸಾಧ್ಯತೆ…!
BREAKING : ಜ.22ರಂದು ‘ಸರ್ಕಾರಿ ಉದ್ಯೋಗಿ’ಗಳಿಗೆ ಅರ್ಧ ದಿನ ರಜೆ : ಕೇಂದ್ರ ಸರ್ಕಾರ ಘೋಷಣೆ