ಬೆಂಗಳೂರು : ಕೈಯಲ್ಲಿ ಗನ್ ಹಿಡಿದುಕೊಂಡು ಜಿಜಾಮೆಟ್ರಿ ಪಬ್ ನುಗ್ಗಿ ಕಳ್ಳತನಕ್ಕೆ ಯತ್ನಿಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಬೆಂಗಳೂರಿನ ರಾಜಾಜಿನಗರದಲ್ಲಿರುವ ಜಾಮೆಟ್ರಿ ಪಬ್ ಗೆ ಗನ್ ಹಿಡಿದು ಕಳ್ಳತನ ಮಾಡಿದ್ದ ಒಡಿಶಾ ಮೂಲದ ಆರೋಪಿ ದಿಲೀಪ್ ಕುಮಾರ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಜೆ.ಪಿ.ನಗರದ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ದಿಲೀಪ್, ಹೋಟೆಲ್ ಬಳಿಯ ರೂಂನಲ್ಲಿ ವಾಸವಿದ್ದ ಆರೋಪಿ ಮೇ. 12 ರಂದು ಹಣಕ್ಕಾಗಿ ಜಾಮಿಟ್ರಿ ಪಬ್ ಗೆ ನುಗ್ಗಿ ಕಳ್ಳತನಕ್ಕೆ ಯತ್ನಿಸಿದ್ದ. ಸ್ಥಳಕ್ಕೆ ಸುಬ್ರಹ್ಮಣ್ಯ ನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಅಷ್ಟರಲ್ಲೇ ದಿಲೀಪ್ ಕುಮಾರ್ ಪರಾರಿಯಾಗಿದ್ದ. ಸದ್ಯ ಆರೋಪಿ ದಿಲೀಪ್ ಕುಮಾರ್ ನನ್ನು ಪೊಲೀಸರು ಬಂಧಿಸಿದ್ದಾರೆ.