ಬೆಳಗಾವಿ : ರಾಜ್ಯ ಸರ್ಕಾರವು ಮೂರು ತಿಂಗಳಿಗೊಮ್ಮೆ ಗೃಹ ಲಕ್ಷ್ಮೀ ಹಣ ಕೊಡುತ್ತೇವೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರು ತಿಂಗಳಿಗೊಮ್ಮೆ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲೊಂದಾದ ಗೃಹಲಕ್ಷ್ಮಿ ಹಣವನ್ನು ನೀಡುತ್ತೇವೆ ಎಂದು ಹೇಳಿದ್ದಾರೆ.
ನಾವು ಆರ್ಥಿಕವಾಗಿ ಸ್ಟ್ರಾಂಗ್ ಇದ್ದೇವೆ. ಜಿಎಸ್ ಟಿ ಕಲೆಕ್ಷನ್ ಆದ್ರೆ ಕೇಂದ್ರದವರು ಅರ್ಧ ಹಣ ಕೊಡಬೇಕು. ಅವರು ಕೋಡುದು 1 ತಿಂಗಳು, ಎರಡು ತಿಂಗಳು ತಡವಾಗುತ್ತೆ. ಮೂರು ತಿಂಗಳಿಗೊಮ್ಮೆ ಗೃಹ ಲಕ್ಷ್ಮೀ ಹಣ ಕೊಡ್ತೇವಿ ಎಂದು ತಿಳಿಸಿದ್ದಾರೆ.








