ನವದೆಹಲಿ : ಕೇಂದ್ರ ಸರ್ಕಾರದ ಬಜೆಟ್ ಬೆನ್ನಲ್ಲೇ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆಯಾಗಿದ್ದು, ಚಿನ್ನದ ಬೆಲೆ ಶೇ.6 ರಷ್ಟು ಇಳಿಕೆಯಾಗಿದೆ.
ಬಜೆಟ್ ಮಂಡನೆ ಬಳಿಕ 22 ಕ್ಯಾರೆಟ್ 10 ಗ್ರಾಂ ಚಿನ್ನ ದರ ಬರೋಬ್ಬರಿ 9,014 ರೂ. ಇಳಿಕೆಯಾಗಿದೆ. ಸದ್ಯ 10 ಗ್ರಾಂ. ಚಿನ್ನದ ಬೆಲೆ 1,43,205 ರೂ. ತಲುಪಿದೆ.
ಇನ್ನೂ ಬೆಳ್ಳಿ ಬೆಲೆಯಲ್ಲೂ ಕುಸಿತವಾಗಿದ್ದು, 1 ಕೆಜಿ ಬೆಳ್ಳಿಗೆ ಶೇ. 19 ರಷ್ಟು ಇಳಿಕೆ ಕಂಡಿದೆ. ಸದ್ಯ ಕೆಜಿ ಬೆಳ್ಳಿಗೆ 3 ಲಕ್ಷದ 12 ಸಾವಿರ ರೂ. ಇದೆ. ಈ ಮೂಲಕ ಆಭರಣ ಪ್ರಿಯರಿಗೆ ಭರ್ಜರಿ ಸಿಹಿಸುದ್ದಿ ಸಿಕ್ಕಿದೆ.







