ನವದೆಹಲಿ : ಡಿಸೆಂಬರ್ 10 ರಂದು ಅಧಿಕೃತ ಹೇಳಿಕೆಯ ಪ್ರಕಾರ, ಕೇಂದ್ರ ಸರ್ಕಾರವು ಕಂದಾಯ ಕಾರ್ಯದರ್ಶಿಯ ಹೆಚ್ಚುವರಿ ಜವಾಬ್ದಾರಿಯನ್ನು ಅಜಯ್ ಸೇಠ್ ಅವರಿಗೆ ವಹಿಸಿದೆ.
ಹಣಕಾಸು ಸಚಿವಾಲಯದಲ್ಲಿ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿಯೂ ಆಗಿರುವ ಸೇಠ್ ಅವರಿಗೆ ತಕ್ಷಣದಿಂದ ಜಾರಿಗೆ ಬರುವಂತೆ ನಿಯಮಿತ ಅಧಿಕಾರದಲ್ಲಿರುವವರು ನೇಮಕವಾಗುವವರೆಗೆ ಅಥವಾ ಮುಂದಿನ ಆದೇಶದವರೆಗೆ ಹೆಚ್ಚುವರಿ ಜವಾಬ್ದಾರಿಯನ್ನ ನಿಯೋಜಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಅಂದ್ಹಾಗೆ, ಡಿಸೆಂಬರ್ 9 ರಂದು ಕಂದಾಯ ಕಾರ್ಯದರ್ಶಿ ಸಂಜಯ್ ಮಲ್ಹೋತ್ರಾ ಅವರನ್ನ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (RBI) ಹೊಸ ಗವರ್ನರ್ ಆಗಿ ಸರ್ಕಾರ ನೇಮಿಸಿದ ನಂತರ ಸೇಠ್ ಅವರಿಗೆ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ.
56 ವರ್ಷದ ಸಂಜಯ್ ಮಲ್ಹೋತ್ರಾ ಅವರು ಡಿಸೆಂಬರ್ 11 ರಂದು ಆರ್ಬಿಐನ 26 ನೇ ಗವರ್ನರ್ ಆಗಿ ಶಕ್ತಿಕಾಂತ ದಾಸ್ ಅವರಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಕಂದಾಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದ ಅವರು ರಾಜಸ್ಥಾನ ಕೇಡರ್ನ 1990ರ ಬ್ಯಾಚ್ನ ಐಎಎಸ್ ಅಧಿಕಾರಿಯಾಗಿದ್ದಾರೆ.
BREAKING : ಸಿರಿಯಾ ಬಂಡುಕೋರರ ಹಂಗಾಮಿ ಸರ್ಕಾರದ ಮುಖ್ಯಸ್ಥರಾಗಿ ‘ಮೊಹಮ್ಮದ್ ಅಲ್-ಬಶೀರ್’ ನೇಮಕ
BREAKING: ಮುರುಡೇಶ್ವರ ಬಳಿ ಸಮುದ್ರದಲ್ಲಿ ಕೊಚ್ಚಿ ಹೋದ ನಾಲ್ವರು ಶಾಲಾ ಮಕ್ಕಳು: ಓರ್ವ ಸಾವು, ಇತರಿಗಾಗಿ ಶೋಧ
Good News : ಇನ್ಮುಂದೆ ‘CUET UG’ನಲ್ಲಿ ಯಾವ ವಿಷಯ ಬೇಕಾದ್ರು ಆಯ್ಕೆ ಮಾಡಬಹುದು ; ‘UGC’ ಮಹತ್ವದ ಘೋಷಣೆ