ನವದೆಹಲಿ : ಮಾರ್ಚ್ 7 ರಂದು ಸರ್ಕಾರವು ಪ್ರಧಾನ ಮಂತ್ರಿ ಉಜ್ವಲ ಯೋಜನೆ (PMUY) ಅಡಿಯಲ್ಲಿ ಪ್ರತಿ ಎಲ್ಪಿಜಿ ಸಿಲಿಂಡರ್’ಗೆ 300 ರೂ.ಗಳ ಸಬ್ಸಿಡಿಯನ್ನು ಮಾರ್ಚ್ 31, 2025 ರವರೆಗೆ ಒಂದು ವರ್ಷ ವಿಸ್ತರಿಸಿದೆ.
ಅಕ್ಟೋಬರ್ನಲ್ಲಿ, ಸರ್ಕಾರವು ಫಲಾನುಭವಿಗಳಿಗೆ ಸಬ್ಸಿಡಿ ಮೊತ್ತವನ್ನ ಪ್ರತಿ ಎಲ್ಪಿಜಿ ಸಿಲಿಂಡರ್’ಗೆ 200 ರೂ.ಗಳಿಂದ 300 ರೂ.ಗೆ ಹೆಚ್ಚಿಸಿತ್ತು.
#WATCH | Union minister Piyush Goyal announces that the Cabinet has approved the continuation of the Rs 300 subsidy to PM Ujjwala Yojana consumers till 31st March 2025. The total expenditure for this will be Rs 12,000 crores, he adds. pic.twitter.com/F65E80v2Hb
— ANI (@ANI) March 7, 2024
ಇನ್ನು ಇದರ ಜೊತೆಗೆ ಹೋಳಿ ಹಬ್ಬಕ್ಕೂ ಮುನ್ನ ಮೋದಿ ಸರ್ಕಾರ ಕೇಂದ್ರ ನೌಕರರು ಮತ್ತು ಪಿಂಚಣಿದಾರರ ತುಟ್ಟಿಭತ್ಯೆ ಮತ್ತು ತುಟ್ಟಿಭತ್ಯೆ ಪರಿಹಾರವನ್ನು ಶೇಕಡಾ 46 ರಿಂದ 50 ಕ್ಕೆ ಹೆಚ್ಚಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತುಟ್ಟಿಭತ್ಯೆ ಹೆಚ್ಚಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅದ್ರಂತೆ, ತುಟ್ಟಿಭತ್ಯೆಯನ್ನ ಜನವರಿ 1 ರಿಂದ ಜೂನ್ 30, 2024 ರವರೆಗೆ ಹೆಚ್ಚಿಸಲಾಗಿದೆ.
ಮಾರ್ಚ್ 7, 2024 ರ ಗುರುವಾರ ನಡೆದ ಕ್ಯಾಬಿನೆಟ್ ಸಭೆಯಲ್ಲಿ ತುಟ್ಟಿಭತ್ಯೆಯನ್ನ ಶೇಕಡಾ 46 ರಿಂದ 50ಕ್ಕೆ ಹೆಚ್ಚಿಸಲು ನಿರ್ಧರಿಸಲಾಗಿದೆ. ಸರ್ಕಾರದ ಈ ನಿರ್ಧಾರದಿಂದ ಸುಮಾರು 49 ಲಕ್ಷ ಕೇಂದ್ರ ನೌಕರರು ಮತ್ತು ಸುಮಾರು 68 ಲಕ್ಷ ಪಿಂಚಣಿದಾರರು ಪ್ರಯೋಜನ ಪಡೆಯಲಿದ್ದಾರೆ.
ಶಿವಮೊಗ್ಗ: ಮಲೆನಾಡಿನಲ್ಲಿ ‘ಜೆಜೆಎಂ ಕಾಮಗಾರಿ’: WTPಯ 11ನೇ ದಿನದ ‘ತಿಥಿ ಆಚರಿಸಿದ’ ಗ್ರಾಮಸ್ಥರು