Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING: ಬೆಂಗಳೂರಲ್ಲಿ ‘ಕಾಮುಕ’ರ ಅಟ್ಟಹಾಸ: ಸ್ನೇಹಿತನ ಮನೆಗೆ ಬಂದಿದ್ದ ಮಹಿಳೆ ಮೇಲೆ ‘ಗ್ಯಾಂಗ್ ರೇಪ್’

09/07/2025 3:28 PM

BREAKING: ರಾಜ್ಯದಲ್ಲಿ ‘ದ್ವಿಭಾಷಾ ಸೂತ್ರ’ ಜಾರಿಗೊಳಿಸಲು ಸರ್ಕಾರ ಸಿದ್ಧತೆ: ‘ಕರಡು’ ಸಿದ್ಧಪಡಿಸಲು ಸೂಚನೆ

09/07/2025 3:22 PM

ICC Test Rankings : ಟಾಪ್ 10ರಲ್ಲಿ ಕ್ಯಾಪ್ಟನ್ ‘ಶುಭ್ಮನ್ ಗಿಲ್’ಗೆ ಸ್ಥಾನ, ‘ಹ್ಯಾರಿ ಬ್ರೂಕ್’ ನಂ.1

09/07/2025 3:20 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಕರ್ನಾಟಕ SC, ST ಹಾಗೂ ಹಿಂದುಳಿದ ವರ್ಗಗಳ ನೇಮಕಾತಿ ತಿದ್ದುಪಡಿ ವಿಧೇಯಕಕ್ಕೆ ರಾಜ್ಯಪಾಲರ ಅಂಕಿತ
KARNATAKA

BREAKING : ಕರ್ನಾಟಕ SC, ST ಹಾಗೂ ಹಿಂದುಳಿದ ವರ್ಗಗಳ ನೇಮಕಾತಿ ತಿದ್ದುಪಡಿ ವಿಧೇಯಕಕ್ಕೆ ರಾಜ್ಯಪಾಲರ ಅಂಕಿತ

By kannadanewsnow5719/08/2024 9:11 AM
vidhana soudha
vidhana soudha

ಬೆಂಗಳೂರು : ಕರ್ನಾಟಕ SC, ST ಹಾಗೂ ಹಿಂದುಳಿದ ವರ್ಗಗಳ ನೇಮಕಾತಿ ತಿದ್ದುಪಡಿ ವಿಧೇಯಕಕ್ಕೆ ರಾಜ್ಯಪಾಲರ ಅಂಕಿತ ಹಾಕಿ ರಾಜ್ಯಪತ್ರ ಹೊರಡಿಸಿದ್ದಾರೆ.

ಕರ್ನಾಟಕ ಅನುಸೂಚಿತ ಜಾತಿಗಳು, ಅನುಸೂಚಿತ ಬುಡಕಟ್ಟುಗಳು ಮತ್ತು ಇತರ ಹಿಂದುಳಿದ ವರ್ಗಗಳ (ನೇಮಕಾತಿ ಮುಂತಾದವುಗಳ ಮೀಸಲಾತಿ) (ತಿದ್ದುಪಡಿ) ವಿಧೇಯಕ, 2024 ಇದಕ್ಕೆ 2024 ರ ಆಗಸ್ಟ್ ತಿಂಗಳ 15 ನೇ ದಿನಾಂಕದಂದು ರಾಜ್ಯಪಾಲರ ಒಪ್ಪಿಗೆ ದೊರೆತಿದ್ದು, ಸಾಮಾನ್ಯ ತಿಳುವಳಿಕೆಗಾಗಿ ಇದನ್ನು 2024 ರ ಕರ್ನಾಟಕ ಅಧಿನಿಯಮಸಂಖ್ಯೆ:42ಎಂಬುದಾಗಿ ಕರ್ನಾಟಕ ರಾಜ್ಯಪತ್ರದ ವಿಶೇಷ ರಾಜ್ಯಪತ್ರಿಕೆ (ಭಾಗ-IVA) ಯಲ್ಲಿ ಪ್ರಕಟಿಸಬೇಕೆಂದು ಆದೇಶಿಸಲಾಗಿದೆ,

ಕರ್ನಾಟಕ ಅನುಸೂಚಿತ ಜಾತಿಗಳು, ಅನುಸೂಚಿತ ಬುಡಕಟ್ಟುಗಳು ಮತ್ತು ಇತರ ಹಿಂದುಳಿದ ವರ್ಗಗಳ (ನೇಮಕಾತಿ ಮುಂತಾದವುಗಳ ಮೀಸಲಾತಿ) (ತಿದ್ದುಪಡಿ)  ಅಧಿನಿಯಮ, 2024  (2024ರ ಆಗಸ್ಟ್ ತಿಂಗಳ 15ನೇ ದಿನಾಂಕದಂದು ರಾಜ್ಯಪಾಲರಿಂದ ಒಪ್ಪಿಗೆಯನ್ನು ಪಡೆಯಲಾಗಿದೆ)

ಕರ್ನಾಟಕ ಅನುಸೂಚಿತ ಜಾತಿಗಳು, ಅನುಸೂಚಿತ ಬುಡಕಟ್ಟುಗಳು ಮತ್ತು ಇತರ ಹಿಂದುಳಿದ ವರ್ಗಗಳ (ನೇಮಕಾತಿ ಮುಂತಾದವುಗಳ ಮೀಸಲಾತಿ) ಅಧಿನಿಯಮ, 1990ನ್ನು ಮತ್ತಷ್ಟು ತಿದ್ದುಪಡಿ ಮಾಡಲು ಒಂದು ಅಧಿನಿಯಮ.

ಇಲ್ಲಿ ಇನ್ನು ಮುಂದೆ ಕಂಡುಬರುವ ಉದ್ದೇಶಗಳಿಗಾಗಿ ಕರ್ನಾಟಕ ಅನುಸೂಚಿತ ಜಾತಿಗಳು, ಅನುಸೂಚಿತ ಬುಡಕಟ್ಟುಗಳು ಮತ್ತು ಇತರ ಹಿಂದುಳಿದ ವರ್ಗಗಳ (ನೇಮಕಾತಿ ಮುಂತಾದವುಗಳ ಮೀಸಲಾತಿ) ಅಧಿನಿಯಮ, 1990 (1991ರ ಕರ್ನಾಟಕ ಅಧಿನಿಯಮ ಸಂ.7)ನ್ನು ಮತ್ತಷ್ಟು ತಿದ್ದುಪಡಿ ಮಾಡುವುದು ಯುಕ್ತವಾಗಿರುವುದರಿಂದ; ಇದು,ಭಾರತ ಗಣರಾಜ್ಯದ ಎಪ್ಪತ್ತೈದನೇ ವರ್ಷದಲ್ಲಿ ಕರ್ನಾಟಕ ರಾಜ್ಯ ವಿಧಾನಮಂಡಲದಿಂದ ಈ ಮುಂದಿನಂತೆ ಅಧಿನಿಯಮಿತವಾಗಲಿ:-

1. ಸಂಕ್ಷಿಪ್ತ ಹೆಸರು ಮತ್ತು ಪ್ರಾರಂಭ.- (1) ಈ ಅಧಿನಿಯಮವನ್ನು ಕರ್ನಾಟಕ ಅನುಸೂಚಿತ ಜಾತಿಗಳು, ಅನುಸೂಚಿತ ಬುಡಕಟ್ಟುಗಳು ಮತ್ತು ಇತರ ಹಿಂದುಳಿದ ವರ್ಗಗಳ (0)

(i) (2)ನೇ ಖಂಡದ ತರುವಾಯ ಈ ಮುಂದಿನದನ್ನು ಸೇರಿಸತಕ್ಕದ್ದು, ಎಂದರೆ:-

“(2ಎ) “ಹೊರಗುತ್ತಿಗೆ ಮೇರೆಗೆ ನೇಮಕಾತಿ” ಎಂದರೆ ರಾಜ್ಯ ನಾಗರೀಕ ಸೇವೆಗಳ ವೃಂದದಲ್ಲಿನ ಅಥವಾ ಸಾರ್ವಜನಿಕ ವಲಯದ ಸಂಸ್ಥೆಗಳ ಯಾವುದೇ ಹುದ್ದೆಗೆ. ಸರ್ಕಾರದಿಂದ ಮಾನ್ಯತೆ ಪಡೆದ ಮಾನವ ಶಕ್ತಿ ಪೂರೈಕೆ ಏಜೆನ್ಸಿಯಿಂದ ನೇರ ನೇಮಕಾತಿ ಕೋಟಾದ ಎದುರಿಗೆ ಮಾಡುವ ನೇಮಕಾತಿ.”

(ii) (4)ನೇ ಖಂಡದ ತರುವಾಯ ಈ ಮುಂದಿನದನ್ನು ಸೇರಿಸತಕ್ಕದ್ದು, ಎಂದರೆ:-

“(4ಎ) “ಅವಧಿ ನಿರ್ದಿಷ್ಟ ಹುದ್ದೆ” ಅಥವಾ “ಸಾವಧಿಕ ಹುದ್ದೆ” ಎಂದರೆ ಸರ್ಕಾರಿ ನೌಕರನು ರಾಜ್ಯ ಸರ್ಕಾರದಡಿಯಲ್ಲಿನ ಅಥವಾ ಸರ್ಕಾರಿ ವಲಯದ ಸೇವೆ ಅಥವಾ ಹುದ್ದೆಯಲ್ಲಿ ಮರು ನೇಮಕಾತಿಯಿಲ್ಲದೆ ನಲವತ್ತೈದು ದಿನಗಳಿಗಿಂತ ಹೆಚ್ಚಲ್ಲದ ಅವಧಿಯವರೆಗೆ ಹೊಂದಿರುವ ಶಾಶ್ವತ ಹುದ್ದೆ.”

(iii) (8)ನೇ ಖಂಡದಲ್ಲಿ..

(ಎ) ಉಪಖಂಡ (1)ರಲ್ಲಿ “ಕರ್ನಾಟಕ ಅನುಸೂಚಿತ ಜಾತಿಗಳು, ಅನುಸೂಚಿತ ಬುಡಕಟ್ಟುಗಳು ಮತ್ತು ಇತರ ಹಿಂದುಳಿದ ವರ್ಗಗಳ (ನೇಮಕಾತಿ ಮುಂತಾದವುಗಳ ಮೀಸಲಾತಿ) (ಎರಡನೇ ತಿದ್ದುಪಡಿ) ಅಧಿನಿಯಮ, 2004ರ (ಇಲ್ಲಿ ಇನ್ನು ಮುಂದೆ ಎರಡನೇ ತಿದ್ದುಪಡಿ ಅಧಿನಿಯಮ 2004 ಎಂದು ಉಲ್ಲೇಖಿಸಲಾಗಿದೆ)” ಎಂಬ ಪದಗಳು, ಅಂಕಿಗಳು ಮತ್ತು ಆವರಣ ಚಿಹ್ನೆಗಳ ಬದಲಾಗಿ ‘ಪ್ರತಿ ನೇರ ನೇಮಕಾತಿಯ ಸಮಯದ” ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು;

(ಬಿ) ಉಪಖಂಡ (ii) ಮತ್ತು (iii) ರಲ್ಲಿ “ಎರಡನೇ ತಿದ್ದುಪಡಿ ಅಧಿನಿಯಮ 2004ರ” ಎಂಬ ಪದಗಳು ಮತ್ತು ಅಂಕಿಗಳ ಬದಲಾಗಿ “ಪ್ರತಿ ನೇರ ನೇಮಕಾತಿಯ ಸಮಯದ” ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು.

3. 3ನೇ ಪ್ರಕರಣದ ತಿದ್ದುಪಡಿ.-ಮೂಲ ಅಧಿನಿಯಮದ 3ನೇ ಪ್ರಕರಣದಲ್ಲಿ.

(i) (ಎ), (ಬಿ) ಮತ್ತು (ಸಿ) ಖಂಡಗಳ ಬದಲಿಗೆ ಈ ಮುಂದಿನದನ್ನು ಪ್ರತಿಯೋಜಿಸತಕ್ಕದ್ದು,

ಎಂದರೆ :-

“(ಎ) ಸಂಶೋಧನೆಯನ್ನು ನಡೆಸಲು ಅಥವಾ ಮಾರ್ಗದರ್ಶನ ನೀಡಲು ಅಥವಾ ನಿರ್ದೇಶನ ನೀಡುವುದಕ್ಕಾಗಿ ಇರುವ ಗ್ರೂಪ್ ‘ಎ’ದರ್ಜೆ (ಕಿರಿಯಶ್ರೇಣಿ) ವೃಂದದ ಮೇಲಿನ ಹುದ್ದೆಗಳು;

(ಬಿ) ವೈಜ್ಞಾನಿಕ ಹುದ್ದೆಗಳೆಂದು ವರ್ಗೀಕರಿಸಲಾದ ಗ್ರೂಪ್ ‘ಎ’ ದರ್ಜೆ (ಕಿರಿಯಶ್ರೇಣಿ)

ವೃಂದದ ಮೇಲಿನ ಹುದ್ದೆಗಳು;

 (ಸಿ) 45 ದಿನಗಳಿಗಿಂತ ಕಡಿಮೆ ಅವಧಿಗಾಗಿ ತಾತ್ಕಾಲಿಕ, ಅರೆಕಾಲಿಕ, ಗುತ್ತಿಗೆ ಆಧಾರದ ಮೇಲೆ ತುಂಬಲಾದ ಅವಧಿ ನಿರ್ದಿಷ್ಟಹುದ್ದೆಗಳು ಅಥವಾ ಸಾವಧಿಕ ಹುದ್ದೆಗಳು.

 (i) (ಡಿ) ಖಂಡವನ್ನು ಬಿಟ್ಟು ಬಿಡತಕ್ಕದ್ದು.

4. 4ನೇ ಪ್ರಕರಣದತಿದ್ದುಪಡಿ.-ಮೂಲ ಅಧಿನಿಯಮದ 4ನೇ ಪ್ರಕರಣದಲ್ಲಿ,-

 (i) (1ಎ) ಉಪ-ಪ್ರಕರಣದಲ್ಲಿ ಎರಡು ಕಡೆಗಳಲ್ಲಿ ಬರುವ “ಎರಡನೇ ತಿದ್ದುಪಡಿ ಅಧಿನಿಯಮ 2004ರ” ಎಂಬ ಪದಗಳು ಮತ್ತು ಅಂಕಿಗಳ ಬದಲಾಗಿ ‘ಪ್ರತಿ ನೇರ ನೇಮಕಾತಿಯ ಸಮಯದ” ಎಂಬಪದಗಳನ್ನು ಪ್ರತಿಯೋಜಿಸತಕ್ಕದ್ದು; ಮತ್ತು

 (ii) (4)ನೇ ಉಪ-ಪ್ರಕರಣದ ತರುವಾಯ ಈ ಮುಂದಿನದನ್ನು ಸೇರಿಸತಕ್ಕದ್ದು,

“(5) ರಾಜ್ಯ ಸಿವಿಲ್ ಸೇವೆಗಳ ವೃಂದದಲ್ಲಿನ ಅಥವಾ ಸರ್ಕಾರಿವಲಯದ ಸಂಸ್ಥೆಗಳಲ್ಲಿನ ಯಾವುದೇ ಹುದ್ದೆಗೆ ನೇರನೇಮಕಾತಿ ಕೋಟಾದ ಎದುರು ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡುವಾಗ, ಸರ್ಕಾರದಿಂದ ಮಾನ್ಯತೆ ಪಡೆದ ಮಾನವಶಕ್ತಿ ಪೂರೈಕೆ ಏಜೆನ್ಸಿಯು, ಅನುಸೂಚಿತ ಜಾತಿಗಳು, ಅನುಸೂಚಿತ ಬುಡಕಟ್ಟುಗಳು ಮತ್ತು ಇತರ ಹಿಂದುಳಿದವರ್ಗಗಳ ಸದಸ್ಯರಿಗೆ ನಿಯಮಿಸಬಹುದಾದ ಅಂಥ ವ್ಯಾಪ್ತಿ ಮತ್ತು ವಿಧಾನದಲ್ಲಿ ಸಾಕಷ್ಟುಪ್ರಾತಿನಿಧ್ಯ ನೀಡಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳತಕ್ಕದ್ದು:

ಪರಂತು, ಹೊರಗುತ್ತಿಗೆ ಆಧಾರದ ಮೇಲಿನ ನೇಮಕಾತಿಯು ತಾತ್ಕಾಲಿಕ ಆಧಾರದಲ್ಲಿರತಕ್ಕದ್ದು ಮತ್ತು ಅದನ್ನು ನೇರನೇಮಕಾತಿ ಕೋಟಾದ ಎದುರು ಕ್ರಮಬದ್ಧಗೊಳಿಸತಕ್ಕದ್ದಲ್ಲ: ಮತ್ತು ಪರಂತು, ಹೊರಗುತ್ತಿಗೆ ಆಧಾರದ ಮೇಲಿನ ನೇಮಕಾತಿಯು ನೇರನೇಮಕಾತಿ ಎದುರಾಗಿ ಮಂಜೂರಾದ ಹುದ್ದೆಗಳ ಶೇಕಡಾ ಹತ್ತರಷ್ಟನ್ನು ಮೀರತಕ್ಕದ್ದಲ್ಲ:

ಅಲ್ಲದೆ ಪರಂತು, ಕರ್ನಾಟಕ ಅನುಸೂಚಿತ ಜಾತಿಗಳು, ಅನುಸೂಚಿತ ಬುಡಕಟ್ಟುಗಳು ಮತ್ತು ಇತರ ಹಿಂದುಳಿದ ವರ್ಗಗಳ (ನೇಮಕಾತಿ ಮುಂತಾದವುಗಳ ಮೀಸಲಾತಿ) (ತಿದ್ದುಪಡಿ) ಅಧಿನಿಯಮ, 2024ರ ಪ್ರಾರಂಭದ ದಿನಾಂಕದಂದು. ಅಥವಾಅದಕ್ಕೆ ಮೊದಲು ಹೊರಗುತ್ತಿಗೆ ಆಧಾರದ ಮೇಲಿನ ನೇಮಕಾತಿಯು ಮಂಜೂರಾದ ಹುದ್ದೆಗಳ ಸಂಖ್ಯಾಬಲದ ಶೇಕಡಾ ಹತ್ತರಷ್ಟುಮೀರಿದ್ದರೆ, ಆಗ ಅಂಥ ನೇಮಕಾತಿಗಳನ್ನು ಪ್ರತಿವರ್ಷ ಶೇಕಡಾ ಹತ್ತರಷ್ಟು ಕಡಿಮೆಗೊಳಿಸತಕ್ಕದ್ದು.

 (6) ಹೊರಗುತ್ತಿಗೆ ನೇಮಕಾತಿ ಮತ್ತು ಏಜೆನ್ಸಿಯ ಮಾನ್ಯತೆಯ ಕುರಿತು ನಿಬಂಧನೆಗಳು ಮತ್ತು ಷರತ್ತುಗಳನ್ನು ಸರ್ಕಾರವು ಕಾಲಕಾಲಕ್ಕೆ ಹೊರಡಿಸಿದ ಆದೇಶದ ಮೂಲಕ ನಿರ್ದಿಷ್ಟ ಪಡಿಸತಕ್ಕದ್ದು.

 5. 4ಎ ಪ್ರಕರಣದ ತಿದ್ದುಪಡಿ.-ಮೂಲ ಅಧಿನಿಯಮದ 4ಎ ಪ್ರಕರಣದಲ್ಲಿ (5)ನೇ ಉಪ- ಪ್ರಕರಣದ ತರುವಾಯ ಈ ಮುಂದಿನದನ್ನು ಸೇರಿಸತಕ್ಕದ್ದು, ಎಂದರೆ:-

 “(6) ತಹಶೀಲ್ದಾರನು ಯಾವುದೇ ಸಮಯದಲ್ಲಿ ಸ್ವಯಂಪ್ರೇರಿತವಾಗಿ ಅಥವಾ ಯಾರೇ ವ್ಯಕ್ತಿಯಿಂದ ಆತನಿಗೆ ಸಲ್ಲಿದ ಅರ್ಜಿಯ ಮೇಲೆ ಸುಳ್ಳು, ಜಾತಿ ಪ್ರಮಾಣ ಪತ್ರದ ಕುರಿತು ಜಾತಿಗೆ ಸಂಬಂಧಪಟ್ಟ ದಾಖಲೆಗಳನ್ನು ಪರಿಶೀಲಿಸತಕ್ಕದ್ದು ಮತ್ತು ಆತನ ಅಭಿಪ್ರಾಯದಲ್ಲಿ ಯಾರ ವಿರುದ್ಧತಪ್ಪು ಮಾಹಿತಿ ನೀಡಿ ಜಾತಿ ಪ್ರಮಾಣಪತ್ರ ಪಡೆದಿರುವ ಆರೋಪವಿದೆಯೋ ಅದು ನಿಜವೆಂದು ಕಂಡುಬಂದಲ್ಲಿ, ಅವನಿಗೆ ನೀಡಿದ ಜಾತಿ ಪ್ರಮಾಣಪತ್ರವನ್ನು ರದ್ದುಗೊಳಿಸತಕ್ಕದ್ದು:

ಪರಂತು, ತಹಶೀಲ್ದಾರನು ಅಂಥ ವ್ಯಕ್ತಿಗೆ ಆತನ ಅಹವಾಲನ್ನು ಹೇಳಿಕೊಳ್ಳಲು ಯುಕ್ತ ಅವಕಾಶವನ್ನು ನೀಡಿದ ಹೊರತು ಯಾವುದೇ ರದ್ಧತಿ ಆದೇಶವನ್ನು ಹೊರಡಿಸತಕ್ಕದ್ದಲ್ಲ.”

6. 4ಡಿ ಪ್ರಕರಣದ ತಿದ್ದುಪಡಿ.-ಮೂಲ ಅಧಿನಿಯಮದ 4ಡಿ ಪುಕರಣದ (2)ನೇಉಪ- ಪ್ರಕರಣದಲ್ಲಿ “ಭಾವಿಸಬಹುದಾದಂಥ ಆದೇಶವನ್ನು” ಎಂಬ ಪದಗಳ ತರುವಾಯ ‘ಅಪೀಲನ್ನು ಸ್ವೀಕರಿಸಿದ ದಿನಾಂಕದಿಂದ ನಾಲ್ಕು ತಿಂಗಳುಗಳ ಅವಧಿಯೊಳಗೆ” ಎಂಬ ಪದಗಳನ್ನು ಸೇರಿಸತಕ್ಕದ್ದು.

BREAKING : ಕರ್ನಾಟಕ SC BREAKING: Governor gives assent to Karnataka SC ST and Backward Classes Recruitment Amendment Bill ST ಹಾಗೂ ಹಿಂದುಳಿದ ವರ್ಗಗಳ ನೇಮಕಾತಿ ತಿದ್ದುಪಡಿ ವಿಧೇಯಕಕ್ಕೆ ರಾಜ್ಯಪಾಲರ ಅಂಕಿತ
Share. Facebook Twitter LinkedIn WhatsApp Email

Related Posts

SHOCKING: ಬೆಂಗಳೂರಲ್ಲಿ ‘ಕಾಮುಕ’ರ ಅಟ್ಟಹಾಸ: ಸ್ನೇಹಿತನ ಮನೆಗೆ ಬಂದಿದ್ದ ಮಹಿಳೆ ಮೇಲೆ ‘ಗ್ಯಾಂಗ್ ರೇಪ್’

09/07/2025 3:28 PM1 Min Read

BREAKING: ರಾಜ್ಯದಲ್ಲಿ ‘ದ್ವಿಭಾಷಾ ಸೂತ್ರ’ ಜಾರಿಗೊಳಿಸಲು ಸರ್ಕಾರ ಸಿದ್ಧತೆ: ‘ಕರಡು’ ಸಿದ್ಧಪಡಿಸಲು ಸೂಚನೆ

09/07/2025 3:22 PM1 Min Read

BIG NEWS: ಶಾಸಕ ಸಿ.ಪಿ ಯೋಗೇಶ್ವರ್ ವಿರುದ್ಧವೇ ಸಿಡಿದೆದ್ದ ಪತಿ, ಪುತ್ರಿ: ‘ಕಾಂಗ್ರೆಸ್ ಹೈಕಮಾಂಡ್’ಗೆ ದೂರು

09/07/2025 3:17 PM1 Min Read
Recent News

SHOCKING: ಬೆಂಗಳೂರಲ್ಲಿ ‘ಕಾಮುಕ’ರ ಅಟ್ಟಹಾಸ: ಸ್ನೇಹಿತನ ಮನೆಗೆ ಬಂದಿದ್ದ ಮಹಿಳೆ ಮೇಲೆ ‘ಗ್ಯಾಂಗ್ ರೇಪ್’

09/07/2025 3:28 PM

BREAKING: ರಾಜ್ಯದಲ್ಲಿ ‘ದ್ವಿಭಾಷಾ ಸೂತ್ರ’ ಜಾರಿಗೊಳಿಸಲು ಸರ್ಕಾರ ಸಿದ್ಧತೆ: ‘ಕರಡು’ ಸಿದ್ಧಪಡಿಸಲು ಸೂಚನೆ

09/07/2025 3:22 PM

ICC Test Rankings : ಟಾಪ್ 10ರಲ್ಲಿ ಕ್ಯಾಪ್ಟನ್ ‘ಶುಭ್ಮನ್ ಗಿಲ್’ಗೆ ಸ್ಥಾನ, ‘ಹ್ಯಾರಿ ಬ್ರೂಕ್’ ನಂ.1

09/07/2025 3:20 PM

BIG NEWS: ಶಾಸಕ ಸಿ.ಪಿ ಯೋಗೇಶ್ವರ್ ವಿರುದ್ಧವೇ ಸಿಡಿದೆದ್ದ ಪತಿ, ಪುತ್ರಿ: ‘ಕಾಂಗ್ರೆಸ್ ಹೈಕಮಾಂಡ್’ಗೆ ದೂರು

09/07/2025 3:17 PM
State News
KARNATAKA

SHOCKING: ಬೆಂಗಳೂರಲ್ಲಿ ‘ಕಾಮುಕ’ರ ಅಟ್ಟಹಾಸ: ಸ್ನೇಹಿತನ ಮನೆಗೆ ಬಂದಿದ್ದ ಮಹಿಳೆ ಮೇಲೆ ‘ಗ್ಯಾಂಗ್ ರೇಪ್’

By kannadanewsnow0909/07/2025 3:28 PM KARNATAKA 1 Min Read

ಬೆಂಗಳೂರು: ನಗರದಲ್ಲಿ ದಿನೇ ದಿನೇ ಕ್ರೈಂಗಳ ಸಂಖ್ಯೆ ಹೆಚ್ಚಾಗುತ್ತಿವೆ. ಇದೀಗ ನಗರದಲ್ಲಿ ಸ್ನೇಹಿತನ ಮನೆಗೆ ಬಂದಿದ್ದಂತ ಮಹಿಳೆಯ ಮೇಲೆಯೇ ಗ್ಯಾಂಗ್…

BREAKING: ರಾಜ್ಯದಲ್ಲಿ ‘ದ್ವಿಭಾಷಾ ಸೂತ್ರ’ ಜಾರಿಗೊಳಿಸಲು ಸರ್ಕಾರ ಸಿದ್ಧತೆ: ‘ಕರಡು’ ಸಿದ್ಧಪಡಿಸಲು ಸೂಚನೆ

09/07/2025 3:22 PM

BIG NEWS: ಶಾಸಕ ಸಿ.ಪಿ ಯೋಗೇಶ್ವರ್ ವಿರುದ್ಧವೇ ಸಿಡಿದೆದ್ದ ಪತಿ, ಪುತ್ರಿ: ‘ಕಾಂಗ್ರೆಸ್ ಹೈಕಮಾಂಡ್’ಗೆ ದೂರು

09/07/2025 3:17 PM

SHOCKING: ಪಾಠ ಕೇಳುವಾಗಲೇ ಹೃದಯಾಘಾತದಿಂದ 4ನೇ ತರಗತಿ ವಿದ್ಯಾರ್ಥಿ ಸಾವು

09/07/2025 3:08 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.