ನವದೆಹಲಿ : ಪೌರತ್ವ ತಿದ್ದುಪಡಿ ಕಾಯ್ದೆಯ ಅನುಷ್ಠಾನವನ್ನು ಕೇಂದ್ರವು ಸೋಮವಾರ ಅಧಿಸೂಚನೆ ಹೊರಡಿಸಿದ ಕೆಲವೇ ಕ್ಷಣಗಳಲ್ಲಿ ಸರ್ಕಾರದ ಇ-ಗೆಜೆಟ್ ವೆಬ್ಸೈಟ್ ಕ್ರ್ಯಾಶ್ ಆಗಿದೆ.
ಅಂದ್ಹಾಗೆ, ಸಿಎಎ ನಿಯಮಗಳನ್ನು ಇ-ಗೆಜೆಟ್ ವೆಬ್ಸೈಟ್ನಲ್ಲಿ ಬಿಡುಗಡೆ ಮಾಡಲಾಗುತ್ತದೆ.
ಭಾರತದ ಚುನಾವಣಾ ಆಯೋಗವು ಲೋಕಸಭಾ ಚುನಾವಣೆಯ ದಿನಾಂಕಗಳನ್ನು ಘೋಷಿಸುವ ಮೊದಲು ಸರ್ಕಾರದ ಅಧಿಸೂಚನೆ ಬಂದಿದೆ.
ಅರ್ಜಿಗಳನ್ನು ಆನ್ ಲೈನ್ ಮೋಡ್ ನಲ್ಲಿ ಸಲ್ಲಿಸಲಾಗುವುದು, ಇದಕ್ಕಾಗಿ ವೆಬ್ ಪೋರ್ಟಲ್ ಅನ್ನು ಒದಗಿಸಲಾಗಿದೆ.
ಡಿಸೆಂಬರ್ 11, 2019 ರಂದು ಸಂಸತ್ತು ಜಾರಿಗೆ ತಂದ ಸಿಎಎ, ಹಿಂದೂ, ಸಿಖ್, ಜೈನ, ಪಾರ್ಸಿ, ಬೌದ್ಧ ಮತ್ತು ಕ್ರಿಶ್ಚಿಯನ್ ಸಮುದಾಯಗಳಿಗೆ ಸೇರಿದ ಮತ್ತು ತಮ್ಮ ದೇಶಗಳಲ್ಲಿ ಧಾರ್ಮಿಕ ಕಿರುಕುಳವನ್ನ ಎದುರಿಸುತ್ತಿರುವ ಕಾರಣ 2014 ರ ಡಿಸೆಂಬರ್ 31ರಂದು ಅಥವಾ ಅದಕ್ಕೂ ಮೊದಲು ಭಾರತಕ್ಕೆ ಪ್ರವೇಶಿಸಿದ ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ವಲಸಿಗರಿಗೆ ಭಾರತೀಯ ಪೌರತ್ವಕ್ಕೆ ತ್ವರಿತ ಮಾರ್ಗವನ್ನ ಒದಗಿಸುವ ಗುರಿಯನ್ನ ಹೊಂದಿದೆ.
ಹಾವೇರಿಯಲ್ಲಿ ‘ಬ್ಯಾಡಗಿ ಮೆಣಸಿನಕಾಯಿ ಬೆಲೆ’ ಕುಸಿತ: ರೈತರಿಂದ ಮಾರುಕಟ್ಟೆಯಲ್ಲಿ ‘ಕಲ್ಲುತೂರಾಟ’
‘ಅಂಗನವಾಡಿ ಕಾರ್ಯಕರ್ತೆ’ಯರಿಗೆ ಗುಡ್ ನ್ಯೂಸ್: ಶೀಘ್ರವೇ ‘2000 ವೇತನ’ ಹೆಚ್ಚಳ- ಸಿಎಂ ಭರವಸೆ
ಭಾರತಕ್ಕೆ ಆನೆ ಬಲ : ಒಂದೇ ಸ್ಥಳದಿಂದ ಅನೇಕ ಗುರಿ ಹೊಂದಿರುವ ‘ಅಗ್ನಿ -5 ಕ್ಷಿಪಣಿ’ ಯಶಸ್ವಿ ಪರೀಕ್ಷೆ