ಬೆಂಗಳೂರು : ರಾಜ್ಯದ ಜನತೆಗೆ ನೆಮ್ಮದಿಯ ಸುದ್ದಿಯೊಂದು ಸಿಕ್ಕಿದ್ದು, ನಂದಿನಿ ಹಾಲಿನ ಹೆಚ್ಚುವರಿ 50 ಎಂಎಲ್ ಹಾಗೂ 2 ರೂ. ದರ ಕಡಿತ ಮಾಡಲು ನಿರ್ಧರಿಸಲಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ ಹೇಳಿದ್ದಾರೆ.
ಸುದ್ದಿಗಾರರೊಂದಗಿಎ ಮಾತನಾಡಿದ ಅವರು, ನಂದಿನಿ ಹಾಲಿನ ದರದಲ್ಲಿ 2 ರೂ.ಕಡಿತ ಮಾಡಲು ನಿರ್ಧರಿಸಲಾಗಿದ್ದು, ಇದೀಗ ನಂದಿನಿ ಹಾಲಿನ ದರ 44 ರೂ.42 ರೂ.ಗೆ ಇಳಿಕೆಯಾಗಲಿದೆ ಎಂದು ಕೆಂಎಫ್ ಅಧ್ಯಕ್ಷ ಭೀಮನಾಯ್ಕ್ ತಿಳಿಸಿದ್ದಾರೆ.
ರಾಜ್ಯ ಸರ್ಕಾರವು ಕೆಲ ದಿನಗಳ ಹಿಂದೆ ಪ್ರತಿ ಲೀಟರ್ನಲ್ಲಿ ಹೆಚ್ಚುವರಿಯಾಗಿ 50 ಎಂಎಲ್ ನೀಡಿ 2 ರೂಪಾಯಿ ಏರಿಕೆ ಮಾಡಿತ್ತು. ಇದೀಗ ಕೆಎಂಎಫ್ ಹಾಲಿನ ದರ 2 ರೂ. ಕಡಿತ ಮಾಡಲು ನಿರ್ಧರಿಸಿದೆ.