ಬೆಂಗಳೂರು : ಬೆಂಗಳೂರಿನ ಜನತೆಗೆ ಜಿಲ್ಲಾಡಳಿತ ನೆಮ್ಮದಿಯ ಸುದ್ದಿ ನೀಡಿದ್ದು, ಆಟೋ ದರ ಏರಿಕೆಗೆ ಜಿಲ್ಲಾಡಳಿತ ಸದ್ಯಕ್ಕೆ ಬ್ರೇಕ್ ಹಾಕಿದೆ.
ಹೌದು, ಆಟೋ ದರ ಏರಿಕೆಗೆ ಜಿಲ್ಲಾಡಳಿತ ಬ್ರೇಕ್ ಹಾಕಿದ್ದು, ಸದ್ಯಕ್ಕೆ ಆಟೋ ಮೀಟರ್ ದರ ಏರಿಕೆ ಮಾಡದಂತೆ ಸೂಚನೆ ನೀಡಲಾಗಿದೆ. ಈ ಮೂಲಕ ಬೆಂಗಳೂರಿನ ಜನತೆಗೆ ನೆಮ್ಮದಿಯ ಸುದ್ದಿಯೊಂದನ್ನು ನೀಡಿದೆ.
ಇನ್ನು ಆಟೋ ದರ ಪರಿಷ್ಕರಣೆಗೆ ಸಂಚಾರ ಪೂರ್ವ ವಿಭಾಗದ ಡಿಸಿಪಿ ಕಚೇರಿಯಲ್ಲಿ ಸಭೆ ಕರೆಯಲಾಗಿತ್ತು, 1 ಕಿಮೀಗೆ 15 ರೂಪಾಯಿ ಇದ್ದು, ಅದನ್ನು 20 ರೂಗೆ ಏರಿಕೆ ಮಾಡಬೇಕು. 2 ಕಿಮೀಗೆ 40 ರೂ ಏರಿಕೆ ಮಾಡಬೇಕು ಎಂದು ಆಟೋ ಚಾಲಕ ಸಂಘಟನೆಗಳು ಮನವಿ ಮಾಡಿದ್ದವು. 3-4 ವರ್ಷದಿಂದ ಆಟೋ ದರ ಏರಿಕೆಗೆ ಆಗ್ರಹಿಸಿ ಹೋರಾಟ ನಡೆಯುತ್ತವೇ ಇದ್ದು, ಆಟೋ ಚಾಲಕರ ಬೇಡಿಕೆ ಈಡೇರಿಸಲು ಜಿಲ್ಲಾಡಳಿತ ಅಸ್ತು ಎಂದಿದೆ. ಏಪ್ರಿಲ್ 1 ರಿಂದ ಅಧಿಕೃತವಾಗಿ ಪರಿಷ್ಕೃತ ಪಟ್ಟಿ ಜಾರಿಯಾಗುವ ಸಾಧ್ಯತೆ ಇದೆ ಎನ್ನಲಾಗಿತ್ತು. ಆದರೆ ಇದೀಗ ಜಿಲ್ಲಾಡಳಿತ ಆಟೋ ದರ ಏರಿಕೆಗೆ ಬ್ರೇಕ್ ಹಾಕಿದೆ.
ಬೆಂಗಳೂರಿನಲ್ಲಿ ಕನಿಷ್ಟ ದರ 30 ರೂ. ಇದ್ದು. ನಂತರದ ಪ್ರತಿ ಕಿ.ಮೀ ಗೆ 15 ರೂ. ಇದೆ. ಪರಿಷ್ಕೃತ ದರ ಪಟ್ಟಿ ಪ್ರಕಾರ ಮಿನಿಮಂ ಚಾರ್ಜ್ 40 ರೂ. ಆಗಲಿದ್ದು, ನಂತರದ ಪ್ರತಿ ಕಿ.ಮೀ.ಗೆ ದರ 20 ರೂ. ಏರಿಕೆ ಮಾಡುವಂತೆ ಆಟೋ ಚಾಲಕರ ಸಂಘ ಮನವಿ ಮಾಡಿತ್ತು.