ನವದೆಹಲಿ : ನೀವು ಮುಂದಿನ ವರ್ಷ ಹಜ್ ಯಾತ್ರೆಗೆ ಹೋಗಲು ತಯಾರಿ ನಡೆಸುತ್ತಿದ್ದರೆ, ಕೇಂದ್ರ ಸರ್ಕಾರವು ನಿಮಗಾಗಿ ಒಳ್ಳೆಯ ಸುದ್ದಿಯನ್ನ ತಂದಿದೆ. ವಾಸ್ತವವಾಗಿ, ಸರ್ಕಾರವು ಮುಂದಿನ ವರ್ಷ ಅಂದರೆ 2026ರಿಂದ ಹಜ್ ಯಾತ್ರೆಗೆ ಸಂಬಂಧಿಸಿದ ಎಲ್ಲಾ ಪ್ರಕ್ರಿಯೆಗಳನ್ನ ಡಿಜಿಟಲೀಕರಣಗೊಳಿಸಲಿದೆ.
ಹಜ್ ಪರಿಶೀಲನಾ ಸಭೆಯ ನಂತ್ರ ಕೇಂದ್ರ ಸಚಿವ ಕಿರಣ್ ರಿಜಿಜು ಈ ಬಗ್ಗೆ ದೊಡ್ಡ ಘೋಷಣೆ ಮಾಡಿದ್ದಾರೆ. 2026ರಲ್ಲಿ ನಡೆಯಲಿರುವ ಹಜ್ ಯಾತ್ರೆಗೆ ನಾವು ಈಗಾಗಲೇ ಸಿದ್ಧತೆಗಳನ್ನ ಪ್ರಾರಂಭಿಸಿದ್ದೇವೆ ಎಂದು ಅವರು ಹೇಳಿದರು. 2025ರಲ್ಲಿ ಹಜ್ ಆಯೋಜನೆ ಅತ್ಯುತ್ತಮವಾಗಿತ್ತು. ಹಜ್ ಯಾತ್ರೆಗೆ ಹೋಗುವ ಯಾತ್ರಿಕರಿಗೆ ವಿಶೇಷ ಸೌಲಭ್ಯಗಳನ್ನು ಒದಗಿಸುವ ಬಗ್ಗೆ ನಾವು ಕೆಲಸ ಮಾಡುತ್ತಿದ್ದೇವೆ.
ಶೀಘ್ರದಲ್ಲೇ ಪೋರ್ಟಲ್ ಪ್ರಾರಂಭ.!
2026 ರಲ್ಲಿ ನಡೆಯಲಿರುವ ಹಜ್ ಯಾತ್ರೆಗಾಗಿ ಮುಂದಿನ ಒಂದು ವಾರದಲ್ಲಿ ಹಜ್ ಪೋರ್ಟಲ್ ತೆರೆಯಲಿದ್ದೇವೆ ಎಂದು ಕಿರಣ್ ರಿಜಿಜು ಹೇಳಿದರು. ಮುಂದಿನ ವರ್ಷ ಹಜ್ ಯಾತ್ರೆಗೆ ಹೋಗಲು ಬಯಸುವವರು ಈ ಮಾರ್ಗವನ್ನ ಕಟ್ಟುನಿಟ್ಟಾಗಿ ಅನುಸರಿಸಬೇಕು. ಹಜ್ ಯಾತ್ರೆಗೆ ಹೋಗುವವರ ವಯಸ್ಸು 65 ವರ್ಷಕ್ಕಿಂತ ಹೆಚ್ಚಿದ್ದರೆ, ಅವರೊಂದಿಗೆ ಪರಿಚಿತ ವ್ಯಕ್ತಿಯೊಬ್ಬರು ಇರುವುದು ಅವಶ್ಯಕವಾಗಿದೆ.
ಉಕ್ರೇನ್’ನಲ್ಲಿ ರಷ್ಯಾ ವಿನಾಶ ಸೃಷ್ಟಿ, ಕೀವ್ ಮೇಲೆ 540 ಡ್ರೋನ್ ಮತ್ತು 11 ಕ್ಷಿಪಣಿ ದಾಳಿ, ವಸತಿ ಪ್ರದೇಶಗಳಿಗೆ ಬೆಂಕಿ
ಅಪರೇಷನ್ ಸಿಂಧೂರ್ ವೇಳೆ ಚೀನಾ ನಮ್ಮ ವಾಹಕಗಳ ಕುರಿತು ಪಾಕ್’ಗೆ ಲೈವ್ ಇನ್ಪುಟ್ಸ್ ನೀಡಿತು ; ಉನ್ನತ ಸೇನಾ ಜನರಲ್