ಬೆಂಗಳೂರು :2025-26ಸಾಲಿನಲ್ಲಿ ಪ್ರಧಾನ ಮಂತ್ರಿ ಪೋಷಣ ಶಕ್ತಿ ನಿರ್ಮಾಣ ಯೋಜನೆಯಡಿ (ಮಧ್ಯಾಹ್ನ ಉಪಹಾರ ಯೋಜನೆ) ಕರ್ತವ್ಯ ನಿರ್ವಹಿಸುತ್ತಿರುವ ಅಡುಗೆ ಸಿಬ್ಬಂದಿಗಳಿಗೆ ಆಗಸ್ಟ್-2025 ರಿಂದ ಅಕ್ಟೋಬರ್-2025ರ ವರೆಗೆ 03 ತಿಂಗಳ ಅವಧಿಯ ಗೌರವ ಸಂಭಾವನೆ ಮೊತ್ತವನ್ನು ಬಿಡುಗಡೆ ಮಾಡಿ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಮೇಲೆ ಓದಲಾದ ಕ್ರಮಾಂಕ (1)ರ 2025-26ನೇ ಸಾಲಿನಲ್ಲಿ ಪಂಚಾಯತ್ಗಳಿಗೆ ಒದಗಿಸಿರುವ ಆಯವ್ಯಯದ ವಿವರಗಳಿಗೆ (ಜಿಲ್ಲಾ, ತಾಲ್ಲೂಕು ಮತ್ತು ಗ್ರಾಮ ಪಂಚಾಯತಿ ಕಾರ್ಯಕ್ರಮಗಳಿಗೆ) ಸಂಬಂಧಿಸಿದ ಸಂಪುಟ-1,2,3&4ರಲ್ಲಿ ರಾಜ್ಯ ಯೋಜನೆ ಕ್ಷೀರಭಾಗ್ಯ (ಎಂ.ಡಿ.ಎಂ) ಕಾರ್ಯಕ್ರಮದ ಲೆಕ್ಕ ಶೀರ್ಷಿಕೆ: 2202-00-101-0-18 (2202-01-196-1-02-300) ថ ជូ ដ F-32408 2025-26 ಒಟ್ಟಾರೆಯಾಗಿ ರೂ.41206.31 ಲಕ್ಷಗಳನ್ನು ನಿಗದಿಪಡಿಸಲಾಗಿದೆ.
ಬಲಾದ ಮೇಲೆ ಓದಲಾದ ಕ್ರಮಾಂಕ (2)ರ ಆರ್ಥಿಕ ಅಧಿಕೃತ ಜ್ಞಾಪನದಲ್ಲಿ ಕಾಲಕಾಲಕ್ಕೆ ಜಾರಿಯಲ್ಲಿರುವ ಮಿತವ್ಯಯದ ಸೂಚನೆಗಳನ್ನು ಮತ್ತು ಸಾಮಾನ್ಯ ಆರ್ಥಿಕ ಅಧಿಕಾರ ಪ್ರತ್ಯಾಯೋಜನೆಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ವಿಧಾನ ಮಂಡಲವು ಅನುಮೋದಿಸಿರುವ ಕರ್ನಾಟಕ ಧನವಿನಿಯೋಗ (ಲೇಖಾನುದಾನ) ವಿಧೇಯಕದನ್ವಯ 2025-26ನೇ ಸಾಲಿನ ವಿವಿಧ ಯೋಜನೆ/ಕಾರ್ಯಕ್ರಮಗಳಿಗೆ ದಿನಾಂಕ: 1ನೇ ಏಪ್ರಿಲ್ 2025 ರಿಂದ 31ನೇ ಮಾರ್ಚ್ 2026ರ ವರೆಗಿನ ಅವಧಿಯ ವೆಚ್ಚವನ್ನು ಭರಿಸಲು ಏ ಇಲಾಖಾ ಮುಖ್ಯಸ್ಥರು ಮತ್ತು ಅಂದಾಜು ಅಧಿಕಾರಿಗಳಿಗೆ ಅಧಿಕಾರ ನೀಡಲಾಗಿರುತ್ತದೆ.
ಮೇಲೆ ಓದಲಾದ ಕ್ರಮಾಂಕ (3)ರ ಸರ್ಕಾರದ ಆದೇಶಲ್ಲಿ 2025-26ನೇ ಸಾಲಿನ ಆಯವ್ಯಯ ಭಾಷಣದಲ್ಲಿನ ಕಂಡಿಕೆ-109ರ ಘೋಷಣೆಯ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಮಧ್ಯಾಹ್ನ ಉಪಹಾರ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಮುಖ್ಯ ಅಡುಗೆಯವರು ಹಾಗೂ ಸಹಾಯಕ ಅಡುಗೆಯವರಿಗೆ ನೀಡಲಾಗುವ ಮಾಸಿಕ ಗೌರವ ಸಂಭಾವನೆಯನ್ನು ದಿನಾಂಕ: 01.06.2025 ಜಾರಿಗೆ ಬರುವಂತೆ ತಲಾ ರೂ.1000/- (ಒಂದು ಸಾವಿರ ರೂಪಾಯಿಗಳು ಮಾತ್ರ) ಗಳಷ್ಟು ಹೆಚ್ಚಿಸಿ ಪಾವತಿಸಲು ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು ಇವರಿಗೆ ಅನುಮತಿ ನೀಡಿ ಆದೇಶಿಸಿದೆ.
 
 
 
 
		







