ಬೆಂಗಳೂರು : ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ತೆರವಾಗಿರುವ ಬೋಧಕ ಸಿಬ್ಬಂದಿ ಹುದ್ದೆಗಳಿಗೆದುರಾಗಿ ಅತಿಥಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವರ ಸಂಭಾವನೆಗಾಗಿ ಅನುದಾನ ಬಿಡುಗಡೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯದ ತಾಲ್ಲೂಕು ಪಂಚಾಯತಿ ವ್ಯಾಪ್ತಿಯ ಶಿಕ್ಷಣ ಇಲಾಖೆಯಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ತೆರವಾಗಿರುವ ಶಿಕ್ಷಕರ ಹುದ್ದೆಗಳಿಗೆದುರಾಗಿ ಅತಿಥಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರ ಸಂಭಾವನೆಗಾಗಿ ರೂ.8697.09ಲಕ್ಷಗಳನ್ನು ಲೆಕ್ಕ ಶೀರ್ಷಿಕೆ: 2202-00-101-0-61-005ರಡಿ ಲಭ್ಯವಿರುವ ಅನುದಾನದಿಂದ ಲೆಕ್ಕ ಶೀರ್ಷಿಕೆ: 2202-00-101-0-61-005ಗೆ ಮರುಹಂಚಿಕೆಗೊಳಿಸಿ ಬಿಡುಗಡೆ ಮಾಡಲು ಅನುಮೋದನೆ ನೀಡಲಾಗಿದ್ದು ಹಾಗೂ ಲೆಕ್ಕ ಶೀರ್ಷಿಕೆ: 2202-00-102-0-62-324ರಡಿ ಕೊರತೆಯಾಗಿರುವ ರೂ.6732.51ಲಕ್ಷಗಳನ್ನು ಪುನರ್ವಿನಿಯೋಗದ ಮೂಲಕ ಹೆಚ್ಚುವರಿಯಾಗಿ ಒದಿಸಲಾಗಿದ್ದು, ಸದರಿ ಅನುದನವನ್ನು ಸಂಬಂಧಪಟ್ಟ ತಾಲ್ಲೂಕು ಪಂಚಾಯಿತಿಗಳಿಗೆ ಬಿಡುಗಡೆಗೊಳಿಸಲು ಮೇಲೆ ಓದಲಾದ ಕಡತದಲ್ಲಿ ಪ್ರಸ್ತಾಪಿಸಿದೆ.
ಪ್ರಸ್ತಾವನೆಯನ್ನು ಪರಿಶೀಲಿಸಿ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಅತಿಥಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರ ಸಂಭಾವನೆಗಾಗಿ ಅಗತ್ಯವಿರುವ ರೂ.8697.09 ಲಕ್ಷಗಳನ್ನು ಅನುದಾನವನ್ನು ಲೆಕ್ಕ ಶೀರ್ಷಿಕ 2202-01-197-1-01-300 (2202-00-101-0-61-324)ರಡಿ ಮತ್ತು ಪ್ರೌಢಶಾಲೆಗಳ ಅತಿಥಿ ಶಿಕ್ಷಕರ ಸಂಭಾವನೆಗಾಗಿ ರೂ.6732.51ಲಕ್ಷಗಳನ್ನು ಲೆಕ್ಕ ಶೀರ್ಷಿಕೆ:2202-02-197-1-01-300 & ಜಿಲ್ಲಾವಾರು(2202-00-102-0-62-324)ರಡಿ ಬಿಡುಗಡೆಗೊಳಿಸಲು ಈ ಕೆಳಕಂಡಂತೆ ಆದೇಶಿಸಲಾಗಿದೆ.
ಸರ್ಕಾರದ ಆದೇಶ ಸಂಖ್ಯೆ: ಆಇ 369 ವೆಚ್ಚ-6/20249 ದಿನಾಂಕ:06ನೇ ಫೆಬ್ರವರಿ 2025
ಪ್ರಸ್ತಾವನೆಯಲ್ಲಿ ವಿವರಿಸಿರುವಂತೆ ಈ ಆದೇಶಕ್ಕೆ ಲಗತ್ತಿಸಿರುವ ಅನುಬಂಧ-1&2 ರ ಕಾಲಂ 3ರ ತಾಲ್ಲೂಕು ಪಂಚಾಯತಿಗಳ ವ್ಯಾಪ್ತಿಯ ಶಿಕ್ಷಣ ಇಲಾಖೆಯಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಅತಿಥಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಕ್ರಮವಾಗಿ ಲೆಕ್ಕ ಶೀರ್ಷಿಕ: 2202-01-197-1-01-300(2202-00-101-0-61-324) ๑.8697.09) ( ថ ಆರು ನೂರ ತೊಂಬತ್ತೇಳು ಲಕ್ಷದ ಒಂಬತ್ತು ಸಾವಿರ ಮಾತ್ರ)ಗಳನ್ನು ಹಾಗೂ ಲೆಕ್ಕ ಶೀರ್ಷಿಕೆ:: 2202-02-197-1-01-300 & 2 (2202-00-102-0-62-324)໖ .6732.51 ( ಸಾವಿರದ ಏಳುನೂರ ಮೂವತ್ತೆರಡು ಲಕ್ಷದ ಐವತ್ತೊಂದು ಸಾವಿರ ಮಾತ್ರ)ಗಳನ್ನು ಬಿಡುಗಡೆಗೊಳಿಸಿದೆ.