ನವದೆಹಲಿ : ಪಿಎಂ ಕಿಸಾನ್ ಯೋಜನೆಯ 22ನೇ ಕಂತಿನ ನಿರೀಕ್ಷೆ ಮುಗಿದಿದ್ದು, ಇದೇ ವಾರ ಅಂದರೇ ಮಾರ್ಚ್ 13ರಂದು ಪಿಎಂ ಕಿಸಾನ್ ಯೋಜನೆಯ 22ನೇ ಕಂತು ಬಿಡುಗಡೆಯಾಗಲಿದೆ ಎಂದು ಕೇಂದ್ರ ಸರ್ಕಾರ ದೃಢ ಪಡಿಸಿದೆ.
ಕಳೆದ ವರ್ಷ ನವೆಂಬರ್‌ನಲ್ಲಿ ಪಿಎಂ ಕಿಸಾನ್ ಯೋಜನೆಯ 21ನೇ ಕಂತು ಬಿಡುಗಡೆಯಾದಾಗಿನಿಂದ ರೈತರು 22ನೇ ಕಂತಿನ ನಿರೀಕ್ಷೆಯಲ್ಲಿದ್ದಾರೆ. ನವೆಂಬರ್ 2025ರಲ್ಲಿ, 9 ಕೋಟಿ ರೈತರ ಖಾತೆಗಳಿಗೆ ₹18,000 ಕೋಟಿ ವರ್ಗಾಯಿಸಲಾಯಿತು. ಅದ್ರಂತೆ, ಯೋಜನೆಯ 22ನೇ ಕಂತು ಮಾರ್ಚ್ 13, 2026 ರಂದು ಬಿಡುಗಡೆಯಾಗಲಿದೆ ಎಂದು ಸರ್ಕಾರ ದೃಢಪಡಿಸಿದೆ.
ಈ ಕಂತು ಬಿಡುಗಡೆಯಾದ ತಕ್ಷಣ, ಲಕ್ಷಾಂತರ ರೈತರ ಖಾತೆಗಳಿಗೆ ನೇರವಾಗಿ ಹಣವನ್ನು ವರ್ಗಾಯಿಸಲಾಗುತ್ತದೆ ಎಂದು ಪಿಎಂ ಕಿಸಾನ್ ಯೋಜನೆಯ ಅಧಿಕೃತ ಟ್ವಿಟರ್ ಹ್ಯಾಂಡಲ್ (ಈಗ ಎಕ್ಸ್) ತಿಳಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 13, 2026ರಂದು ಅಸ್ಸಾಂನ ಕೊಕ್ರಝಾರ್’ಗೆ ಭೇಟಿ ನೀಡಲಿದ್ದಾರೆ, ಅಲ್ಲಿ ಅವರು ಹಲವಾರು ಪ್ರಮುಖ ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ 22ನೇ ಕಂತನ್ನು ಬಿಡುಗಡೆ ಮಾಡಲಿದ್ದಾರೆ.
‘ಇಸ್ರೇಲ್- ಇರಾನ್’ಗೆ ‘ಪ್ರಧಾನಿ ಮೋದಿ’ ಒಂದು ಫೋನ್ ಕರೆ ಮಾಡಿದ್ರು ಯುದ್ಧ ಕೊನೆಗೊಳ್ಳುತ್ತೆ ; UAE ರಾಯಭಾರಿ
BREAKING : ನೇಪಾಳ ಚುನಾವಣಾ ಗೆಲುವಿಗೆ ‘ರಬಿ ಲಾಮಿಚಾನೆ & ಬಾಲೇಂದ್ರ ಶಾ’ಗೆ ‘ಪ್ರಧಾನಿ ಮೋದಿ’ ಅಭಿನಂದನೆ!








