ಬೆಂಗಳೂರು : ಬೆಂಗಳೂರಿನ ವಾಹನ ಸವಾರರಿಗೆ ಟೋಯಿಂಗ್ ಶಾಕ್ ನಡುವೆಯೇ ಸಿಹಿಸುದ್ದಿಯೊಂದು ಸಿಕ್ಕಿದೆ. ಟೋಯಿಂಗ್ ಮಾಡಿದ್ರೂ ವಾಹನ ಸವಾರರಿಗೆ ಹೆಚ್ಚುವರಿ ಹೊರೆ ಇರುವುದಿಲ್ಲ.
ಹೌದು, ಪೊಲೀಸರು ಟೋಯಿಂಗ್ ಚಾರ್ಜ್ ಹಾಕದಿರಲು ನಿರ್ಧರಿಸಿದ್ದಾರೆ. ನೋ ಪಾರ್ಕಿಂಗ್ ಫೈನ್ ಬಿಟ್ಟು ಹೆಚ್ಚುವರಿ 800 ರೂ. ಶುಲ್ಕ ವಿಧಿಸಿಸುತ್ತಿದ್ದರು. ಹೆಚ್ಚುವರಿ ಶುಲ್ಕದಿಂದಲೇ ಟೋಯಿಂಗ್ ಸಿಬ್ಬಂದಿ ಜೊತೆಗೆ ಗಲಾಟೆ ಆಗುತ್ತಿತ್ತು. ಆದರೆ ಇದೀಗ ಟೋಯಿಂಗ್ ಶುಲ್ಕ ವಿಧಿಸದಿರಲು ಪೊಲೀಸರು ನಿರ್ಧಾರ ಕೈಗೊಂಡಿದ್ದಾರೆ.
ಬೆಂಗಳೂರಿನಲ್ಲಿ ಮತ್ತೆ ಟೋಯಿಂಗ್
ನಗರದಲ್ಲಿ ಟೋಯಿಂಗ್ ಹಗಲು ದರೋಡೆಯ ಕಾರಣಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ಹೊರ ಹಾಕಿದ್ದರು. ಹೀಗಾಗಿ ಟೋಯಿಂದ್ ಸ್ಥಗಿತಗೊಳಿಸಲಾಗಿತ್ತು. ಇದೀಗ ಮತ್ತೆ ಬೆಂಗಳೂರಲ್ಲಿ ಟೋಯಿಂಗ್ ಪುನರಾರಂಭಗೊಳಿಸಲಾಗುತ್ತಿದೆ.
ಈ ಬಗ್ಗೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅಧಿಕೃತ ಮಾಹಿತಿ ನೀಡಿದ್ದು, ಬಾಡಿಗೆ ಟೋಯಿಂಗ್ ವಾಹನ ಬಳಸದೇ ಪೊಲೀಸ್ ಇಲಾಖೆಯ ವಾಹನ ಬಳಸಿಕೊಂಡು ಬೆಂಗಳೂರಲ್ಲಿ ಟೋಯಿಂಗ್ ಪುನರಾರಂಭಿಸಲು ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದಾಗಿ ತಿಳಿದು ಬಂದಿದೆ.
ಅಂದಹಾಗೇ 2022ರಲ್ಲಿ ಬೆಂಗಳೂರಲ್ಲಿ ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದಂತ ಬಸವರಾಜ ಬೊಮ್ಮಾಯಿ ಅವರು ಟೋಯಿಂಗ್ ರದ್ದುಗೊಳಿಸಿದ್ದರು. ಪಾರ್ಕಿಂಗ್ ಅಲ್ಲದ ಜಾಗದಲ್ಲಿ ವಾಹನ ನಿಲುಗಡೆ ಮಾಡುತ್ತಿದ್ದದ್ದನ್ನು ಟೋಯಿಂಗ್ ಮಾಡುತ್ತಿದ್ದದ್ದು ನಿಲ್ಲಿಸಲಾಗಿತ್ತು. ಬದಲಾಗಿ ನೋ ಪಾರ್ಕಿಂಗ್ ಸ್ಥಳದಲ್ಲಿ ವಾಹನ ನಿಲ್ಲಿಸಿದ್ದರೇ ದಂಡಾಸ್ತ್ರ ಪ್ರಯೋಗದ ಆದೇಶ ಮಾಡಲಾಗಿತ್ತು. ಇದೀಗ ಮತ್ತೆ ಟೋಯಿಂಗ್ ಬೆಂಗಳೂರಲ್ಲಿ ಆರಂಭಗೊಳ್ಳಲಿದೆ.
BREAKING : `ಟೋಯಿಂಗ್ ಶಾಕ್’ ನಡುವೆ ಬೆಂಗಳೂರಿನ ವಾಹನ ಸವಾರರಿಗೆ ಗುಡ್ ನ್ಯೂಸ್.!