ಬೆಂಗಳೂರು : ರಾಜ್ಯ ಸರ್ಕಾರವು ಅನ್ನಭಾಗ್ಯ ಯೋಜನೆ ಫಲಾನುಭವಿಗಳಿಗೆ ಸಿಹಿಸುದ್ದಿ ನೀಡಿದ್ದು, ಹಣದ ಬದಲು 10 ಕೆಜಿ ಅಕ್ಕಿ ಕೊಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಅನ್ನಭಾಗ್ಯ ಯೋಜನೆಯಡಿ ಪ್ರತಿ ಫಲಾನುಭವಿಗಳಿಗೆ ಹಣದ ಬದಲು 10 ಕೆಜಿ ಅಕ್ಕಿ ಕೊಡಲು ನಿರ್ಧರಿಸಲಾಗಿದೆ. ಫೆಬ್ರವರಿ ತಿಂಗಳಿನಿಂದಲೇ 10 ಕೆಜಿ ಅಕ್ಕಿ ವಿತರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ.
ನಿಗದಿತ ಸಮಯಕ್ಕೆ ಡಿಬಿಟಿ ಮೂಲಕ ಫಲಾನುಭವಿಗಳ ಖಾತೆಗೆ ಪಡಿತರದ ಅಕ್ಕಿ ಹಣ ಜಮಾ ಮಾಡುತ್ತಿಲ್ಲ. ಕೆಲವು ತಿಂಗಳು ತಾಂತ್ರಿಕತೆಯ ಸಮಸ್ಯೆ ನೆಪವೊಡ್ಡಿ ವಿಳಂಬ ಆಗಿದೆ. ಇದೀಗ ಹಣದ ಬದಲಿಗೆ ಅಕ್ಕಿ ಕೊಡಲು ಚಿಂತನೆ ನಡೆದಿದೆ. ಆದರೆ ಅಕ್ಕಿ, ಹಣ ಎರಡು ಕೂಡ ಫಲಾನುಭವಿಗಳಿಗೆ ಸಿಗದೇ ತೊಂದರೆಯಾಗಿದೆ. ಇದನ್ನು ಮನಗಂಡು ಹೆಚ್ಚುವರಿ ಐದು ಕೆಜಿ ಅಕ್ಕಿಯನ್ನೇ ನೀಡಲು ಸರ್ಕಾರ ಚಿಂತನೆ ನಡೆಸಿದೆ
ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ದಾರರಿಗೆ ಹಣದ ಬದಲು ಅಕ್ಕಿ ವಿತರಿಸುವ ಸಾಧ್ಯತೆ ಇದೆ. ಅಕ್ಕಿ ಪಡೆಯಲು ಆಹಾರ ಇಲಾಖೆ ಪ್ರಯತ್ನಿಸಿದ್ದು, ಇದೇ ಕಾರಣಕ್ಕೆ ಹಣದ ವರ್ಗಾವಣೆ ಸ್ಥಗಿತವಾಗಿದೆ ಎನ್ನುವ ಮಾತುಗಳು ಕೇಳಿ ಬಂದಿವೆ.