ನವದೆಹಲಿ: ಉತ್ತರ ಪ್ರದೇಶದ ಗೊಂಡಾದಲ್ಲಿ ಚಂಡೀಗಢ-ದಿಬ್ರುಘರ್ ಎಕ್ಸ್ಪ್ರೆಸ್ ರೈಲಿನ ಹಲವಾರು ಬೋಗಿಗಳು ಹಳಿ ತಪ್ಪಿದ ಪರಿಣಾಮ ನಾಲ್ವರು ಪ್ರಯಾಣಿಕರು ಸಾವನ್ನಪ್ಪಿದ್ದು, ಕನಿಷ್ಠ 20 ಜನರು ಗಾಯಗೊಂಡಿದ್ದಾರೆ. ಉತ್ತರ ಪ್ರದೇಶದ ಗೊಂಡಾ ಮತ್ತು ಜಿಲಾಹಿ ನಡುವಿನ ಪಿಕೌರಾದಲ್ಲಿ ಈ ಘಟನೆ ನಡೆದಿದೆ.
ಸಧ್ಯ ರೈಲ್ವೆ ಸಚಿವಾಲಯ ಈ ದುರ್ಘಟನೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ. ಇನ್ನು ಗಂಭೀರವಾಗಿ ಗಾಯಗೊಂಡವರಿಗೆ 2.5 ಲಕ್ಷ ರೂಪಾಯಿ ಮತ್ತು ಸಣ್ಣಪುಟ್ಟ ಗಾಯಗೊಂಡವರಿಗೆ 50,000 ರೂಪಾಯಿ ಪರಿಹಾರ ಘೋಷಿಸಿದೆ. ಇನ್ನು ಸಿಆರ್ಎಸ್ ತನಿಖೆಯ ಹೊರತಾಗಿ, ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ.
ಅಂದ್ಹಾಗೆ, ಉತ್ತರಪ್ರದೇಶದಲ್ಲಿ ಹಳಿ ತಪ್ಪಿದ ರೈಲಿನ ಚಾಲಕ ಅಪಘಾತದ ಮೊದಲು ದೊಡ್ಡ ಸ್ಫೋಟದ ಶಬ್ದ ಕೇಳಿಸಿತು ಎಂದು ಲೋಕೋ ಪೈಲಟ್ ಹೇಳಿದ್ದಾರೆ. ಹೀಗಾಗಿ ಪಿತೂರಿ ಕೋನದಿಂದಲೂ ತನಿಖೆ ಆರಂಭಿಸಲಾಗಿದೆ ಎನ್ನಲಾಗ್ತಿದೆ.
ತೆರಿಗೆದಾರರೇ ಗಮನಿಸಿ ; ಜುಲೈ 31ರೊಳಗೆ ‘ITR’ ಸಲ್ಲಿಸಿ, ಇಲ್ಲದಿದ್ರೆ ಭಾರಿ ದಂಡ ಪಾವತಿಸಬೇಕಾಗುತ್ತೆ!
BREAKING : ‘ದಿಬ್ರುಗಢ ಎಕ್ಸ್ಪ್ರೆಸ್’ ರೈಲು ಅಪಘಾತಕ್ಕೂ ಮುನ್ನ ದೊಡ್ಡ ‘ಸ್ಫೋಟದ ಶಬ್ದ’ ; ಲೋಕೋ ಪೈಲಟ್ ಮಾಹಿತಿ