ಬೆಂಗಳೂರು : ಬೆಂಗಳೂರಿನಲ್ಲಿ ಶ್ರೀಸಾಯಿ ಗೋಲ್ಡ್ ಪ್ಯಾಲೇಸ್ ನ 1 ಕೆಜಿ 249 ಗ್ರಾಂ ಚಿನ್ನ ಕಳ್ಳತನವಾಗಿರುವ ಘಟನೆ ನಡೆದಿದೆ.
ಬೆಂಗಳೂರಿನ ನಗರ್ತಪೇಟೆಯ ಕೋನಾರ್ಕ್ ಹಾಲ್ ಮಾರ್ಕಿಂಗ್ ಚಿನ್ನ ನೀಡಿದ್ದ ವೇಳೆ ಚಿನ್ನ ಕಳ್ಳತನವಾಗಿದೆ ಎಂದು ಶ್ರೀಸಾಯಿ ಗೋಲ್ಡ್ ಪ್ಯಾಲೇಸ್ ನ ಮ್ಯಾನೇಜರ್ ಭೀಮರಾಜ್ ದೂರು ನೀಡಿದ್ದಾರೆ.
ನಗರ್ತಪೇಟೆಯ ಹಾಲ್ ಮಾರ್ಕಿಂಗ್ ಸೆಂಟರ್ ಗೆ ಚಿನ್ನ ಕೊಟ್ಟಿದ್ದು, ಇದೀಗ ಚಿನ್ನ ಕಳ್ಳತನವಾಗಿದೆ. ನಮ್ಮಲ್ಲಿ ಕೆಲಸ ಮಾಡುತ್ತಿದ್ದವನು ಕಳ್ಳತನ ಮಾಡಿದ್ದಾನೆ ಎಂದು ಭರತ್ ಎಂಬುವರು ಹೇಳಿದ್ದಾರೆ. ಈ ಸಂಬಂಧ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.