ಚಿತ್ರದುರ್ಗ : ಚಿತ್ರದುರ್ಗ ನಗರದಲ್ಲಿ ಹಾಡಹಾಗಲೇ ಗ್ಯಾಂಗ್ ವಾರ್ ನಡೆದಿದ್ದು, ನಾಲ್ವರು ಯುವಕರ ಮೇಲೆ ಮನಬಂದಂತೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಸೆಪ್ಟೆಂಬರ್ 20 ರಂದು ಚಿತ್ರದುರ್ಗ ನಗರದ ಜೆಸಿಆರ್ ಬಡಾವಣೆಯಲ್ಲಿ ಈ ಘಟನೆ ನಡೆದಿದ್ದು, ಜಿಮ್ಮಿ ಅಲಿಯಾಸ್ ಅಶೋಕ್ ಗ್ಯಾಂಗ್ ನಿಂದ ನಾಲ್ವರು ಯುವಕರ ಮೇಲೆ ಹಲ್ಲೆ ನಡೆಸಲಾಗಿದೆ.
ಐಕಾನ್ ಫಿಟ್ನೆಸ್ ಜಿಮ್ ನ ರಾಕೇಶ್ ಮೇಲೆ ಹಲ್ಲೆ ನಡೆಸಲಾಗಿದೆ. ಜಗಳ ಬಿಡಿಸಲು ಬಂದಿದ್ದ ತರುಣ್ ಹಾಗೂ ದರ್ಶನ್ ಎಂಬುವರ ಮೇಲೂ ಹಲ್ಲೆ ನಡೆಸಲಾಗಿದೆ. ಜಿಮ್ಮಿ ಅಲಿಯಾಸ್ ಅಶೋಕ್, ರಾಜೇಶ್, ನೂತನ್, ಅಮ್ಮಿ ಎಂಬುವರಿಂದ ಹಲ್ಲೆ ನಡೆಸಲಾಗಿದೆ. ಘಟನೆ ಸಂಬಂಧ ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.