ನವದೆಹಲಿ : ಭಾನುವಾರ (ಡಿಸೆಂಬರ್ 22) ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಅವರ ಬೆಂಗಾವಲು ವಾಹನದಲ್ಲಿ ಪೊಲೀಸ್ ವಾಹನ ಪಲ್ಟಿಯಾದ ಪರಿಣಾಮ ನಾಲ್ವರು ಪೊಲೀಸರು ಗಾಯಗೊಂಡಿದ್ದಾರೆ.
ಪಾಲಿ ಜಿಲ್ಲೆಯ ರೋಹತ್ ಮತ್ತು ಪನಿಹಾರಿ ಕ್ರಾಸ್‌ರೋಡ್ ಬಳಿ ಅಪಘಾತ ಸಂಭವಿಸಿದೆ. ಪೊಲೀಸ್ ವಾಹನದ ಚಾಲಕ ಮೋಟಾರ್ ಸೈಕಲ್ ಸವಾರನಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಯತ್ನಿಸಿದ್ದರಿಂದ ವಾಹನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ವಸುಂಧರಾ ರಾಜೆ ಅವರು ತಮ್ಮ ತಾಯಿಯ ನಿಧನದ ಕುರಿತು ಸಂಪುಟ ಸಚಿವ ಓಟರಾಮ್ ದೇಸಿ ಅವರಿಗೆ ಸಾಂತ್ವನ ಹೇಳಲು ಜಿಲ್ಲೆಯ ಬಾಲಿ ಗ್ರಾಮಕ್ಕೆ ಬಂದಿದ್ದರು. ವಾಹನವು ಪಲ್ಟಿಯಾದಾಗ, ರಾಜೆ ತಕ್ಷಣವೇ ತಮ್ಮ ವಾಹನವನ್ನು ನಿಲ್ಲಿಸಿ ಗಾಯಗೊಂಡ ಪೊಲೀಸರನ್ನು ಆಂಬ್ಯುಲೆನ್ಸ್‌ನಲ್ಲಿ ಬಾಲಿ ಆಸ್ಪತ್ರೆಗೆ ಸಾಗಿಸಲಾಯಿತು.