ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಗಾಝಾ ಕದನ ವಿರಾಮದ ಬಳಿಕ 477 ದಿನಗಳ ಕಾಲ ಸೆರೆಯಲ್ಲಿದ್ದ ನಾಲ್ವರು ಇಸ್ರೇಲಿ ಮಹಿಳಾ ಸೈನಿಕರನ್ನು ಹಮಾಸ್ ಬಿಡುಗಡೆ ಮಾಡಿದೆ.
ನಾಲ್ವರು ಇಸ್ರೇಲಿ ಸೈನಿಕರನ್ನ ಹಮಾಸ್ ಇಂದು ಬಿಡುಗಡೆ ಮಾಡಿದ್ದು, ಇನ್ನವ್ರು ಮಿಲಿಟರಿ ಸಮವಸ್ತ್ರದಲ್ಲಿ ಕರೆತಂದು ವೇದಿಕೆಯ ಮೇಲೆ ನಿಂತು ಕೈ ಬೀಸಿದರು. ಅವರನ್ನು ರೆಡ್ ಕ್ರಾಸ್ ಸದಸ್ಯರಿಗೆ ಹಸ್ತಾಂತರಿಸಲಾಯಿತು ಮತ್ತು ವಾಹನವು ಈಗ ಒತ್ತೆಯಾಳುಗಳೊಂದಿಗೆ ಗಾಝಾದಿಂದ ಹೊರಟಿದೆ.
ಅಕ್ಟೋಬರ್ 7, 2023 ರಿಂದ ಒತ್ತೆಯಾಳುಗಳಾಗಿದ್ದ ನಾಲ್ವರು ಇಸ್ರೇಲಿ ಮಹಿಳಾ ಸೈನಿಕರನ್ನು ಬಿಡುಗಡೆ ಮಾಡುವುದಾಗಿ ಹಮಾಸ್ ಶುಕ್ರವಾರ ಉಲ್ಲೇಖಿಸಿತ್ತು. ಇಸ್ರೇಲ್ ಮತ್ತು ಗಾಜಾ ನಡುವಿನ ಕದನ ವಿರಾಮ ಒಪ್ಪಂದದ ಅಡಿಯಲ್ಲಿ ಇದು ಎರಡನೇ ವಿನಿಮಯವಾಗಿದೆ.
BREAKING : ಚಾಮರಾಜನಗರದಲ್ಲಿ ಘೋರ ದುರಂತ : ಬಸ್ ನಿಂದ ತಲೆ ಹೊರ ಹಾಕಿದ ಮಹಿಳೆ, ಲಾರಿ ಡಿಕ್ಕಿಯಾಗಿ ರುಂಡ ಕಟ್!