ಬೆಂಗಳೂರು : ಬೆಂಗಳೂರಿನಲ್ಲಿ ತಡರಾತ್ರಿ ಘೋರ ಘಟನೆಯೊಂದು ನಡೆದಿದ್ದು, ಸಿಲಿಂಡರ್ ಲೀಕೇಜ್ ಆಗಿ ಸ್ಪೋಟಗೊಂಡು ಒಂದೇ ಕುಟುಂಬದ ನಾಲ್ವರು ಗಾಯಗೊಂಡಿದ್ದಾರೆ.
ಬೆಂಗಳೂರಿನ ಡಿ.ಜೆ.ಹಳ್ಳಿ ಅನಂದ್ ಥಿಯೇಟರ್ ಬಳಿ ಸಿಲಿಂಡರ್ ಲೀಕೇಜ್ ನಿಂದ ಸಿಲಿಂಡರ್ ಸ್ಪೋಟಗೊಂಡ ಪರಿಣಾಮ ಮೂರು ಮನೆಗಳು ಛಿದ್ರವಾಗಿದ್ದು, ಒಂದೇ ಕುಟುಂಬದ ನಾಲ್ವರು ಗಾಯಗೊಂಡಿದ್ದಾರೆ.
ಗಾಯಗೊಂಡವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಪೋಟಕಕ್ಕೆ ಸಿಲಿಂಡರ್ ಲೀಕ್ ಆಗಿದ್ದೇ ಕಾರಣ ಎನ್ನಲಾಗಿದೆ.