ದ್ವಾರಕಾ : ಗುಜರಾತ್ ನ ದ್ವಾರಕಾ ಜಿಲ್ಲೆಯಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ ತಗುಲಿ ಮಗು ಸೇರಿದಂತೆ ನಾಲ್ವರು ಸಜೀವ ದಹನವಾಗಿರುವ ಘಟನೆ ನಡೆದದೆ.
ಗುಜರಾತ್ ನ ದ್ವಾರಕಾ ಜಿಲ್ಲೆಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದಾರೆ. ಮೃತರಲ್ಲಿ ಏಳು ತಿಂಗಳ ಮಗಳು, ಗಂಡ ಮತ್ತು ಹೆಂಡತಿ ಮತ್ತು ಅಜ್ಜಿ ಸೇರಿದ್ದಾರೆ. ಮುಂಜಾನೆ 3 ರಿಂದ 4 ಗಂಟೆಯ ನಡುವೆ ಈ ಘಟನೆ ನಡೆದಿದ್ದು, ಮನೆಯಲ್ಲಿ ಶಾಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿದೆ.
ಮೃತರನ್ನು ಪವನ್, ಕಮಲೇಶ್ ಉಪಾಧ್ಯಾಯ (30), ಪವನ್ ಉಪಾಧ್ಯಾಯ (27), ಧ್ಯಾನ ಉಪಾಧ್ಯಾಯ (7 ತಿಂಗಳು) ಮತ್ತು ಪವನ್ ಅವರ ತಾಯಿ ಭಾಮಿನಿಬೆನ್ ಉಪಾಧ್ಯಾಯ ಎಂದು ಗುರುತಿಸಲಾಗಿದೆ.