ನವದೆಹಲಿ : ಐಪಿಎಲ್ 2025ರ ಮೆಗಾ ಹರಾಜು ಸೋಮವಾರ ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಎರಡನೇ ದಿನ ಪುನರಾರಂಭಗೊಂಡಿದ್ದು, ಆರ್ಸಿಬಿಯ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ 2 ಕೋಟಿ ಬೆಲೆಗೆ ದೆಹಲಿ ಕ್ಯಾಪಿಟಲ್ಸ್ ಪಾಲಾಗಿದ್ದಾರೆ.
ಅಂದ್ಹಾಗೆ, ಇಂಡಿಯನ್ ಪ್ರೀಮಿಯರ್ ಲೀಗ್ (IPL) 2025ರ ಎರಡು ದಿನಗಳ ಮೆಗಾ ಹರಾಜು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯುತ್ತಿದೆ. ಇಂದು ಎರಡನೇ ಅಂದರೆ ಕೊನೆಯ ದಿನ (ನವೆಂಬರ್ 25) ಹರಾಜು ಕೂಡ ಆರಂಭವಾಗಿದೆ. ಎರಡನೇ ದಿನ 132 ಆಟಗಾರರು ಮಾರಾಟವಾಗಲಿದ್ದಾರೆ. ಇವುಗಳನ್ನು ಖರೀದಿಸಲು ಎಲ್ಲಾ 10 ತಂಡಗಳ ಪರ್ಸ್‌ನಲ್ಲಿ ಒಟ್ಟು 173.55 ಕೋಟಿ ರೂಪಾಯಿ ಇದೆ.
ಮೊದಲ ದಿನವೇ 3 ಆಟಗಾರರ ಮೇಲೆ ಹಣದ ಸುರಿಮಳೆಗೈದಿದ್ದು, ಐಪಿಎಲ್ ಇತಿಹಾಸದ ಎಲ್ಲಾ ದಾಖಲೆಗಳನ್ನ ಮುರಿದಿದೆ. ಈ ಮೂವರು ಆಟಗಾರರು ವಿಕೆಟ್‌ಕೀಪರ್ ರಿಷಬ್ ಪಂತ್, ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಮತ್ತು ಆಲ್ ರೌಂಡರ್ ವೆಂಕಟೇಶ್ ಅಯ್ಯರ್. ಅದ್ರಂತೆ, ಪಂತ್ ಅವರನ್ನು ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) 27 ಕೋಟಿ ಬಿಡ್‌ನೊಂದಿಗೆ ಖರೀದಿಸಿತು. ಈ ಮೂಲಕ ಪಂತ್ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದಾರೆ.
BIG NEWS : ಚನ್ನಪಟ್ಟಣದಲ್ಲಿ 150 ಕೋಟಿ ಖರ್ಚು ಮಾಡಿ ನಿಖಿಲ್ ಸೋತರು : ಮಾಜಿ ಸಚಿವ ಸಿಎಂ ಇಬ್ರಾಹಿಂ ಹೇಳಿಕೆ
BREAKING : ಹುಬ್ಬಳ್ಳಿಯಲ್ಲಿ ಭೀಕರ ಮರ್ಡರ್ : ಬುದ್ಧಿವಾದ ಹೇಳಿದಕ್ಕೆ ತಂದೆಯನ್ನೇ ಕೊಂದ ಪಾಪಿ ಮಗ!
BREAKING : ಹುಬ್ಬಳ್ಳಿಯಲ್ಲಿ ಭೀಕರ ಮರ್ಡರ್ : ಬುದ್ಧಿವಾದ ಹೇಳಿದಕ್ಕೆ ತಂದೆಯನ್ನೇ ಕೊಂದ ಪಾಪಿ ಮಗ!