ಬೆಂಗಳೂರು : ಏಪ್ರಿಲ್ 25 ರಂದು 84 ನೇ ವಯಸ್ಸಿನಲ್ಲಿ ನಿಧನರಾದ ಇಸ್ರೋ ಮಾಜಿ ಮುಖ್ಯಸ್ಥ ಡಾ. ಕೆ. ಕಸ್ತೂರಿರಂಗನ್ ಅವರ ಅಂತ್ಯಕ್ರಿಯೆಯನ್ನು ಸರ್ಕಾರಿ ಗೌರವಗಳೊಂದಿಗೆ ನಡೆಸಲಾಯಿತು.
1940ರ ಅಕ್ಟೋಬರ್ 24ರಂದು ಕೇರಳದ ಎರ್ನಾಕುಲಂನಲ್ಲಿ ಜನಿಸಿದ ಕಸ್ತೂರಿರಂಗನ್ ಅವರು ಮೂರು ದಶಕಗಳ ಕಾಲ ಭಾರತೀಯ ಬಾಹ್ಯಾಕಾಶ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಕೇವಲ ಬಾಹ್ಯಾಕಾಶ ಕ್ಷೇತ್ರದಲ್ಲಷ್ಟೇ ಅಲ್ಲದೆ, ಪರಿಸರ, ಶಿಕ್ಷಣ ಮತ್ತು ಯೋಜನಾ ಆಯೋಗದಲ್ಲಿಯೂ ಇವರ ಕೊಡುಗೆ ಸ್ಮರಣೀಯವಾದದ್ದು.
ಕಸ್ತೂರಿರಂಗನ್ 2003ರವರೆಗೆ ೯ಕ್ಕೂ ಹೆಚ್ಚು ವರ್ಷಗಳ ಕಾಲ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ಯ ನೇತೃತ್ವ ವಹಿಸಿದ್ದರು. ಬಾಹ್ಯಾಕಾಶ ಆಯೋಗದ ಅಧ್ಯಕ್ಷರಾಗಿ ಮತ್ತು ಬಾಹ್ಯಾಕಾಶ ಇಲಾಖೆಯಲ್ಲಿ ಭಾರತ ಸರ್ಕಾರಕ್ಕೆ ಕಾರ್ಯದರ್ಶಿಯಾಗಿ ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದರು. 2003-2009ರವೆಗೆ ರಾಜ್ಯಸಭಾ ಸದಸ್ಯರಾಗಿ ದ್ದರು. ದೇಶದ ಅತ್ಯುನ್ಯತ ನಾಗರಿಕ ಪ್ರಶಸ್ತಿಗಳಾದ ಪದ್ಮಶ್ರೀ (1982), ಪದ್ಮಭೂಷಣ (1992) ಮತ್ತು ಪದ್ಮ ವಿಭೂಷಣ (2000) ಪಡೆದುಕೊಂಡಿದ್ದರು.
#WATCH | Bengaluru, Karnataka | Former ISRO chief Dr K Kasturirangan, who passed away on April 25 at the age of 84 years old, cremated with state honours. pic.twitter.com/F4w611Jqgg
— ANI (@ANI) April 27, 2025