ಲಕ್ನೋ:ಲಕ್ನೋದ ಹೊರವಲಯದಲ್ಲಿರುವ ಕಾಕೋರಿಯ ಹಟಾ ಹಜರತ್ ಸಾಹೇಬ್ ಪ್ರದೇಶದ ಎರಡು ಅಂತಸ್ತಿನ ವಸತಿ ಕಟ್ಟಡದಲ್ಲಿ ಮಂಗಳವಾರ ತಡರಾತ್ರಿ ಭಾರಿ ಬೆಂಕಿ ಕಾಣಿಸಿಕೊಂಡಿದೆ.
ಮಕ್ಕಳೊಂದಿಗೆ ಸಂವಾದ: ವೈಚಾರಿಕತೆ, ವೈಜ್ಞಾನಿಕತೆ ಬೆಳೆಸಿಕೊಳ್ಳಲು ಸಿಎಂ ಸಿದ್ದರಾಮಯ್ಯ ಸಲಹೆ!
ಎರಡು ಅಂತಸ್ತಿನ ವಸತಿ ಕಟ್ಟಡದಲ್ಲಿ ಸಂಭವಿಸಿದ ಬೆಂಕಿಯಲ್ಲಿ ಐದು ಜನರು ಸಾವನ್ನಪ್ಪಿದ್ದಾರೆ.
ಬೆಂಕಿ ಕಾಣಿಸಿಕೊಂಡ ಕೂಡಲೇ ಗ್ಯಾಸ್ ಸಿಲಿಂಡರ್ ನಲ್ಲಿ ಕೂಡ ಸ್ಫೋಟ ಸಂಭವಿಸಿದೆ. ಬೆಂಕಿಯು ಮನೆಯಾದ್ಯಂತ ಹರಡಿದ್ದರಿಂದ ಕಟ್ಟಡದೊಳಗಿನ ಜನರು ಹೊರಬರಲು ಸಾಧ್ಯವಾಗಲಿಲ್ಲ.
ಋತುಬಂಧವು ರೋಗವಲ್ಲ ,ಭಯಪಡದಿರಿ: ತಜ್ಞರು | Menopause is not a disease
ಮೃತರನ್ನು ಮುಶೀರ್ ಅಲಿ (50), ಅವರ ಪತ್ನಿ ಹುಸ್ನಾ ಬಾನು (45), ಸೊಸೆಯಂದಿರಾದ ರೈಯಾ (5), ಹಿಬಾ (2) ಮತ್ತು ಹುಮಾ (3) ಎಂದು ಗುರುತಿಸಲಾಗಿದೆ.
ಮುಶೀರ್ ಅವರ ಇಬ್ಬರು ಹೆಣ್ಣುಮಕ್ಕಳು ಸೇರಿದಂತೆ ಇತರ ನಾಲ್ವರನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ. ಅವರೆಲ್ಲರನ್ನೂ ಗಂಭೀರ ಸ್ಥಿತಿಯಲ್ಲಿ ಕೆಜಿಎಂಯುನ ಆಘಾತ ಕೇಂದ್ರಕ್ಕೆ ದಾಖಲಿಸಲಾಗಿದೆ.
ಮುಶೀರ್ ಅಲಿ ಪಟಾಕಿ ಮಾರಾಟಗಾರನಾಗಿದ್ದು, ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಸ್ಫೋಟಕ ವಸ್ತುಗಳಿಂದ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ವಿಧಿವಿಜ್ಞಾನ ತಜ್ಞರನ್ನು ಕರೆಸಲಾಗಿದ್ದು, ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.